ADVERTISEMENT

ಬನ್ನೇರುಘಟ್ಟ: ನೀರಾನೆ ಮರಿ ಸಾವು

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2011, 19:30 IST
Last Updated 26 ಅಕ್ಟೋಬರ್ 2011, 19:30 IST

ಆನೇಕಲ್:  ಬನ್ನೇರುಘಟ್ಟ ಜೈವಿಕ ಉದ್ಯಾನ ಮೂರು ವರ್ಷದ ನೀರಾನೆ (ಹಿಪ್ಪೋಪೋಟಮಸ್) ಮರಿಯೊಂದು ಬುಧವಾರ ಮೃತಪಟ್ಟಿದೆ.

ಕಳೆದ ಆರು ತಿಂಗಳಿಂದ ಚರ್ಮರೋಗದಿಂದ ಬಳಲುತ್ತಿದ್ದ ನೀರಾನೆ ಮರಿಯು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ರಾಜು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಉದ್ಯಾನದ ಕಾರ್ತಿಕ್ ಮತ್ತು ಸೀತಾಳಿಗೆ ಮೂರು ವರ್ಷಗಳ ಹಿಂದೆ ಈ ಮರಿ ಜನಿಸಿತ್ತು.

ಸಿಂಹಗಳಿಗೆ ಶಸ್ತ್ರಚಿಕಿತ್ಸೆ: ಉದ್ಯಾನದ ಪ್ರಾಣಿ ಪುನರ್ವಸತಿ ಕೇಂದ್ರದಲ್ಲಿ ವಿವಿಧ ಸರ್ಕಸ್ ಕಂಪೆನಿಗಳಿಂದ ವಶಪಡಿಸಿಕೊಂಡು ಸಂರಕ್ಷಿಸಲಾಗಿರುವ ಹಲವು ಸಿಂಹಗಳು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದವು. ಈ ಪೈಕಿ ಗರ್ಭಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಏಳು ಸಿಂಹಗಳಿಗೆ ಶಸ್ತ್ರಚಿಕಿತ್ಸೆ ನಡೆಸಿ ಗರ್ಭಕೋಶ ತೆಗೆದುಹಾಕಲಾಗಿದ್ದು, ಚಿಕಿತ್ಸೆಗೆ ಸಿಂಹಗಳು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿವೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ರಾಜು ತಿಳಿಸಿದ್ದಾರೆ. ಉದ್ಯಾನದ ವೈದ್ಯ ಡಾ.ಚೆಟ್ಟಿಯಪ್ಪ,   ಸಹಾಯಕ ಪ್ರಾಧ್ಯಾಪಕ ಡಾ.ನರಸಿಂಹಮೂರ್ತಿ ಶಸ್ತ್ರಚಿಕಿತ್ಸೆಯಲ್ಲಿ         ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.