ಕೃಷ್ಣರಾಜಪುರ: `ಬಸವಣ್ಣನವರ ವಚನ ಸಾಹಿತ್ಯದಲ್ಲಿ ಇರುವ ತತ್ವಗಳು ಮತ್ತು ರೇಣುಕಾಚಾರ್ಯರ ಸಿದ್ದಾಂತ ಶಿಖಾಮಣಿ ಗ್ರಂಥದಲ್ಲಿ ಇರುವ ತತ್ವಗಳು ಒಂದಕ್ಕೊಂದು ಪೂರಕವಾಗಿವೆ~ ಎಂದು ಅಕ್ಕಿ ಹಾಲೂರು ಮುತ್ತಿನ ಕಂಥಿನ ಮಠದ ಅಧ್ಯಕ್ಷ ಚಂದ್ರಶೇಖರ ದೇವರು ಅಭಿಪ್ರಾಯಪಟ್ಟರು.
ವಿಭೂತಿಪುರ ವೀರಸಿಂಹಾಸನ ಮಠದ ಆವರಣದಲ್ಲಿ ಏರ್ಪಡಿಸಿದ್ದ ರೇಣುಕಾಚಾರ್ಯರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ಮಠದ ಪಟ್ಟಾಧ್ಯಕ್ಷ ಡಾ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, `ಬಸವಣ್ಣನವರ ತತ್ವಗಳು ಎಂದಿಗೂ ಪ್ರಸ್ತುತ~ ಎಂದು ಪ್ರತಿಪಾದಿಸಿದರು.
ನಾ ಕು.ಗಣೇಶ್ ಸ್ವರಚಿತ ಕವಿತೆ ವಾಚಿಸಿದರು. ಇದೇ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ವೈಸಿ.ಚೆನ್ನರಸಪ್ಪ ಅವರನ್ನು ಸನ್ಮಾನಿಸಲಾಯಿತು. ಮಠದ ಉಚಿತ ವಿದ್ಯಾರ್ಥಿ ನಿಲಯದ ಮಕ್ಕಳು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಶಿಕ್ಷಕ ನಟರಾಜ್ ಸ್ವಾಗತಿಸಿ, ಸಾಲಿಮಠ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.