ADVERTISEMENT

ಬಸ್ ಪಾಸ್: ಹೆಚ್ಚುವರಿ ಕೌಂಟರ್‌ಗೆ ಮನವಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2013, 19:59 IST
Last Updated 9 ಜೂನ್ 2013, 19:59 IST

ಕೃಷ್ಣರಾಜಪುರ: `ಕೌಂಟರ್‌ಗಳ ಕೊರತೆ ಯಿಂದ ಬಸ್ ಪಾಸ್ ಪಡೆಯಲು ವಿದ್ಯಾರ್ಥಿಗಳು ಹರಸಾಹಸ ಮಾಡ ಬೇಕಿದೆ. ಈ ನಿಟ್ಟಿನಲ್ಲಿ ಹೆಚ್ಚುವರಿ ಕೌಂಟರ್‌ಗಳನ್ನು ತೆರೆಯಬೇಕು' ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಮನವಿ ಮಾಡಿದ್ದಾರೆ.

`ಚಿಕ್ಕ ಕೊಠಡಿಯಲ್ಲಿರುವ ಕೌಂಟರ್‌ನಲ್ಲಿ ಬಸ್ ಪಾಸ್ ವಿತರಣೆಯಾಗುತ್ತಿದೆ. ಪಾಸ್ ಪಡೆಯಲು ಪೋಷಕರು ಗಂಟೆ ಗಟ್ಟಲೆ ಸರದಿಯಲ್ಲಿ ನಿಲ್ಲಬೇಕಿದೆ' ಎಂದು ವಿದ್ಯಾರ್ಥಿನಿಯ ತಂದೆ ಕೃಷ್ಣಮೂರ್ತಿ ಬೇಸರಪಟ್ಟರು. `ಪ್ರತಿವರ್ಷವೂ ಬಸ್ ಪಾಸ್ ಪಡೆಯಲು ಕಷ್ಟಬೇಕಿದೆ. ಕೆಲವು ಬಾರಿ ಸರತಿ ಸಾಲು ರಸ್ತೆಯ ಮಧ್ಯೆ ಭಾಗಕ್ಕೂ ವಿಸ್ತರಣೆಯಾಗುತ್ತಿದೆ. ವಿತರಣಾ ಪ್ರಕ್ರಿಯೆ ಗೊಂದಲದ ಗೂಡಾ ಗಿದೆ' ಎಂದು ಅವರು ದೂರಿದರು.

`ಸದ್ಯ ಒಂದು ಕೌಂಟರಿನಲ್ಲಿ ಮಾತ್ರ ಬಸ್ ಪಾಸ್ ವಿತರಣೆ ಮಾಡಲಾ ಗುವುದು. ಹೀಗಾಗಿ ಭಾನುವಾರವೂ ಪಾಸ್ ವಿತರಣೆಗೆ ಕ್ರಮ ಕೈಗೊಳ್ಳ ಲಾಗಿದೆ. ನೂಕುನುಗ್ಗಲು ಗಮನಕ್ಕೆ ಬಂದಿದ್ದು ಹೆಚ್ಚುವರಿ ಕೌಂಟರ್ ಆರಂಭಿಸಲು ಶೀಘ್ರ ಕ್ರಮ ಕೈಗೊಳ್ಳ ಲಾಗುವುದು' ಎಂದು ಬಿಎಂಟಿಸಿ ಘಟಕ 24 ಮತ್ತು 29ರ ವ್ಯವಸ್ಥಾಪಕ ಚಂದ್ರಶೇಖರ್ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.