ಬೆಂಗಳೂರು: ಬ್ರೈಟ್ ಶಾಲೆಯ ನಾಲ್ಕು ವರ್ಷದ ಮಗು ಮಹಮ್ಮದ್ ಪೈಜಲ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ಶಾಲಾ ವಾಹನದ ಚಾಲಕ ಭರತ್‌ಸಿಂಗ್ (35) ಎಂಬಾತನನ್ನು ಚಿಕ್ಕಜಾಲ ಸಂಚಾರ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಉತ್ತರಪ್ರದೇಶ ಮೂಲದ ಭರತ್‌ಸಿಂಗ್ ಥಣಿಸಂದ್ರದಲ್ಲಿ ವಾಸವಾಗಿದ್ದಾನೆ. ಶಾಲೆ ಮುಗಿದ ನಂತರ ಮಗುವನ್ನು ಮನೆಗೆ ಬಿಡಲು ವಾಹನದಲ್ಲಿ ಕರೆದುಕೊಂಡು ಬಂದ ಚಾಲಕ, ರಾಚೇನಹಳ್ಳಿ ಮುಖ್ಯರಸ್ತೆಯಲ್ಲಿ ಫೈಜಲ್‌ನನ್ನು ಇಳಿಸಿದ್ದ. ಆ ವೇಳೆ ವಾಹನದ ಬಾಗಿಲು ಬಡಿದು ಮಗು ಸಾವನ್ನಪ್ಪಿತ್ತು.
`ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಚಾಲಕನನ್ನು ಸಾರ್ವಜನಿಕರು ಬೈಕ್‌ಗಳಲ್ಲಿ ಹಿಂಬಾಲಿಸಿದರು. ಥಣಿಸಂದ್ರ ಬಸ್ ನಿಲ್ದಾಣದ ಬಳಿ ವಾಹನವನ್ನು ಅಡ್ಡಗಟ್ಟಿ ಚಾಲಕನಿಗೆ ಥಳಿಸಿದರು. ಪ್ರಾಣ ಭಯದಿಂದ ಚಾಲಕ ವಾಹನ ಬಿಟ್ಟು ಓಡಿಹೋಗಿದ್ದ~ ಎಂದು ಪ್ರತ್ಯಕ್ಷದರ್ಶಿ ಬಾಬು ತಿಳಿಸಿದರು.
ಬೈಟ್ ಶಾಲೆಯ ವಾಹನಗಳ ಮೇಲ್ವಿಚಾರಣೆ ಜವಾಬ್ದಾರಿ ಹೊತ್ತಿರುವ ಮಹಮ್ಮದ್ ಉಬೈದ್‌ಉಲ್ಲಾ ಅವರು ಭರತ್‌ಸಿಂಗ್‌ನನ್ನು ಚಿಕ್ಕಜಾಲ ಸಂಚಾರ ಪೊಲೀಸರ ವಶಕ್ಕೆ ಒಪ್ಪಿಸಿದರು. ಆತನ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.