ADVERTISEMENT

ಬಾಲ್ಯವಿವಾಹ ಸಮಾಜದ ಘೋರ ಅಪರಾಧ

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 20:01 IST
Last Updated 17 ಜುಲೈ 2017, 20:01 IST
ಬಾಲ್ಯವಿವಾಹ ಸಮಾಜದ ಘೋರ ಅಪರಾಧ
ಬಾಲ್ಯವಿವಾಹ ಸಮಾಜದ ಘೋರ ಅಪರಾಧ   

ಕನಕಪುರ: ‘ಬಾಲ್ಯ ವಿವಾಹ ಮಾಡುವುದು ಕಾನೂನಿನನ್ವಯ ಘೋರ ಅಪರಾಧ, ಅದರಿಂದ ಮಕ್ಕಳು ಉತ್ತಮ ಭವಿಷ್ಯವನ್ನು ನಾವೇ ನಾಶ ಮಾಡಿ ದಂತಾಗುತ್ತದೆ’ ಎಂದು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್‌ ನ್ಯಾಯಾಧೀಶ ಮಹಮ್ಮದ್‌ ಮುಜಾಹಿದ್‌ ಉಲ್ಲಾ ಹೇಳಿದರು.

ನಗರದ ರೂರಲ್‌ ಕಾಲೇಜಿನಲ್ಲಿ   ಸೋಮವಾರ ಏರ್ಪಡಿಸಿದ್ದ ‘ಬಾಲ್ಯ ವಿವಾಹ ತಡೆಗಟ್ಟುವ ಮತ್ತು ಶಾಲೆ ಕಡೆ ನನ್ನ ನಡೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಮಕ್ಕಳ ಭವಿಷ್ಯದ ಬಗ್ಗೆ ನೂರಾರು ಬಣ್ಣದ ಕನಸು ಕಟ್ಟಿಕೊಳ್ಳುವ ಪೋಷಕರು ಉತ್ತಮ ವಿದ್ಯಾಭ್ಯಾಸ ಕೊಡಿ ಸುತ್ತಾರೆ. ಅವರಿಗಿಷ್ಟ ಆಗುವ ರೀತಿಯಲ್ಲಿ ನೋಡಿಕೊಳ್ಳುತ್ತಾರೆ. ಆದರೆ ಮದುವೆ ವಯಸ್ಸಿಗೂ ಮುನ್ನವೇ ಅವರಿಗೆ ಬಾಲ್ಯವಿವಾಹ ಮಾಡಿ ಅವರ ಭವಿಷ್ಯ ನಾಶ ಪಡಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.