ADVERTISEMENT

ಬಿಎಂಟಿಸಿ ಮೆಟ್ರೊ ಫೀಡರ್ ಸೇವೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2011, 18:45 IST
Last Updated 18 ಅಕ್ಟೋಬರ್ 2011, 18:45 IST

ಬೆಂಗಳೂರು: ಗುರುವಾರದಿಂದ ಎಂ.ಜಿ.ರಸ್ತೆ ಹಾಗೂ ಬೈಯಪ್ಪನ ಹಳ್ಳಿ ನಡುವೆ ಮೊದಲ ಹಂತದ ಮೆಟ್ರೊ ರೈಲು ಸಂಚಾರ ಕಾರ್ಯರಂಭ ಮಾಡಲಿರುವ ಹಿನ್ನೆಲೆಯಲ್ಲಿ ಬಿಎಂಟಿಸಿ ಅಂದು ಮಧ್ಯಾಹ್ನ ದಿಂದಲೇ ಮೆಟ್ರೊ ಫೀಡರ್ ಸೇವೆಗಳನ್ನು ಒದಗಿಸಲು ನಿರ್ಧರಿಸಿದೆ.

ಎಂ.ಜಿ.ರಸ್ತೆ, ಟ್ರಿನಿಟಿ ವೃತ್ತ, ಹಲಸೂರು, ಇಂದಿರಾನಗರ, ಎಸ್. ವಿ.ರಸ್ತೆ ಮತ್ತು ಬೈಯಪ್ಪನಹಳ್ಳಿ ಮೆಟ್ರೊ ರೈಲು ನಿಲ್ದಾಣಗಳ ಸುತ್ತಲಿನ ಪ್ರದೇಶಗಳಿಂದ ರೈಲು ನಿಲ್ದಾಣಗಳಿಗೆ ನೇರ ಸಾರಿಗೆ ಸಂಪರ್ಕ ಕಲ್ಪಿಸಲಾಗುತ್ತಿದೆ. 6 ಮೆಟ್ರೊ ನಿಲ್ದಾಣಗಳಿಗೆ ಒಟ್ಟು 24 ಮೆಟ್ರೊ ಫೀಡರ್ ಮಾರ್ಗಗಳನ್ನು ಒದಗಿಸಲಿದೆ. ಪ್ರತಿ 10 ನಿಮಿಷಗಳ ಅಂತರದಲ್ಲಿ ವಾಹನಗಳು ಸಂಚರಿಸಲಿವೆ.

ಸಂಚಾರ ಪೊಲೀಸ್ ಅಧಿಕಾರಿಗಳು ಹಾಗೂ ಬಿಎಂಆರ್‌ಸಿಎಲ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಬಿಎಂಟಿಸಿ ಮಾರ್ಗ ಗಳನ್ನು ನಿಗದಿ ಪಡಿಸಿದೆ. ಎರಡು ಮೂರು ವಾರಗಳ ಬಳಿಕ ಸಾರ್ವ ಜನಿಕರಿಂದ ಮಾಹಿತಿ ಪಡೆದು ಸೇವೆ ಪರಿಷ್ಕರಿಸಲು ಚಿಂತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.