ADVERTISEMENT

ಬೃಹತ್ ಬ್ರಹ್ಮರಥೋತ್ಸವ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 19:30 IST
Last Updated 21 ಫೆಬ್ರುವರಿ 2011, 19:30 IST

ಕೆಂಗೇರಿ: ಮಾಗಡಿ ರಸ್ತೆಯ ಹೇರೋಹಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧ ಆಂಜನೇಯ ಸ್ವಾಮಿಯ ಬ್ರಹ್ಮ ರಥೋತ್ಸವ ಈಚೆಗೆ ಅದ್ಧೂರಿಯಾಗಿ ನಡೆಯಿತು.

ಸ್ವಾಮಿಯ ಮೂರ್ತಿಯನ್ನು ರಥೋತ್ಸವದಲ್ಲಿ ಇಟ್ಟು ಪೂಜಿಸಿದ ನಂತರ ಭಕ್ತರು ಜೈಕಾರಗಳೊಂದಿಗೆ ರಥವನ್ನು ಎಳೆದರು.

ರಸ್ತೆಯ ಉದ್ದಕ್ಕೂ ಹೆಂಗಳೆಯರು ನಾಡಿನ ಸಂಸ್ಕೃತಿ ಬಿಂಬಿಸುವ ವಿಶಿಷ್ಟ ಬಣ್ಣದ ಬಟ್ಟೆಗಳನ್ನು ತೊಟ್ಟು ರಥಕ್ಕೆ ಆರತಿ ಹಿಡಿದು ಪೂಜಿಸಿದರು. ಮನೆಯ ಬಾಗಿಲಲ್ಲಿ ವಿವಿಧ ಬಗೆಯ ರಂಗೋಲಿಗಳು ಗಮನ ಸೆಳೆದವು.

ಯಕ್ಷಗಾನ, ವೀರಗಾಸೆ, ಡೊಳ್ಳು ಕುಣಿತ, ಮಹಿಳಾ ವೀರಗಾಸೆ, ಗಾರ್ಡಿ ಗೊಂಬೆ, ಪೂಜಾ ಕುಣಿತ, ಕಂಸಾಳೆ, ಸೋಮನ ಕುಣಿತ, ಕುಂಭ ಕಹಳೆ, ಡೋಲು, ಕೀಲು ಕುದುರೆ, ಗೊರವನ ಕುಣಿತ ಮೆರವಣಿಗೆಯ ಪ್ರಮುಖ ಆರ್ಕಷಣೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.