ADVERTISEMENT

ಬೆಂಗಳೂರು ನಗರದಲ್ಲಿ ಬಿರುಸಿನ ಮಳೆ: 17 ಮರಗಳು ಧರೆಗೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 13:28 IST
Last Updated 30 ಮಾರ್ಚ್ 2018, 13:28 IST
ಬೆಂಗಳೂರು ನಗರದಲ್ಲಿ ಬಿರುಸಿನ ಮಳೆ: 17 ಮರಗಳು ಧರೆಗೆ
ಬೆಂಗಳೂರು ನಗರದಲ್ಲಿ ಬಿರುಸಿನ ಮಳೆ: 17 ಮರಗಳು ಧರೆಗೆ   

ಬೆಂಗಳೂರು: ನಗರದ ಹಲವೆಡೆ ಶುಕ್ರವಾರ ಸಂಜೆ ಬಿರುಗಾಳಿ, ಗುಡುಗು ಹಾಗೂ ಮಿಂಚು ಸಹಿತ ಬಿರುಸಿನ ಮಳೆಯಾಗಿದೆ.

ಸಂಜೆ 4ರ ನಂತರ ಮೋಡ ಕವಿದ ವಾತಾವರಣ ಇತ್ತು. ಕೆಲ ಸಮಯದಲ್ಲೇ ಜೋರಾಗಿ ಬಿರುಗಾಳಿ ಬೀಸಿದೆ. ಬಳಿಕ ಅರ್ಧ ಗಂಟೆ ವರೆಗೂ ಹಲವೆಡೆ ಜೋರು ಮಳೆಯಾಗಿದ್ದು 17 ಮರಗಳು ಬಿದ್ದಿವೆ.

ವಿಧಾನಸೌಧ, ಮೆಜೆಸ್ಟಿಕ್, ಎಂ.ಜಿ.ರಸ್ತೆ, ರಿಚ್ಮಂಡ್‌ ಟೌನ್, ಶಾಂತಿನಗರ, ಬಸವನಗುಡಿ, ಜಯನಗರ, ಜೆ.ಪಿ.ನಗರ, ಬನಶಂಕರಿ, ಮಲ್ಲೇಶ್ವರ, ಹೆಬ್ಬಾಳ, ಶಿವಾಜಿನಗರ, ಹಲಸೂರು, ಇಂದಿರಾನಗರ, ರಾಜಾಜಿನಗರ, ಬಸವೇಶ್ವರ ನಗರ, ವಿಜಯನಗರ, ಯಶವಂತಪುರ, ಹನುಮಂತನಗರ ಹಾಗೂ ಸುತ್ತಮುತ್ತ ಕೆಲ ಹೊತ್ತು ಜೋರು ಮಳೆಯಾಗಿದೆ.

ADVERTISEMENT

ಅಲ್ಲಿಯ ಪ್ರಮುಖ ರಸ್ತೆಗಳಲ್ಲಿ ನೀರು ತುಂಬಿಹರಿಯಿತು. ಅದರಲ್ಲೆ ವಾಹನಗಳು ಸಂಚರಿಸಿದವು. ಶಿವಾನಂದ ವೃತ್ತದ ಬಳಿಯ ಕೆಳ ಸೇತುವೆ ಬಳಿ ನಿಂತಿದ್ದ ನೀರಿನಲ್ಲಿ ಕೆಲ ವಾಹನಗಳು ಸಂಚರಿಸಿದ್ದರಿಂದ ಅವುಗಳು ನೀರಿನ ಮಧ್ಯೆಯೇ ಕೆಟ್ಟು ನಿಂತವು. ಕೆಳಗೆ ಇಳಿದ ಸವಾರರು ತಮ್ಮ ವಾಹನಗಳನ್ನು ತಳ್ಳಿಕೊಂಡು ಮುಂದೆ ಸಾಗಿದರು. ಹೀಗಾಗಿ, ಈ ಮಾರ್ಗದಲ್ಲಿ ವಾಹನಗಳ ಸಂಚಾರ ನಿಧಾನಗತಿಯಲ್ಲಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.