ADVERTISEMENT

ಬೆದರಿಸಿ ಅತ್ಯಾಚಾರ ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2017, 20:09 IST
Last Updated 11 ಅಕ್ಟೋಬರ್ 2017, 20:09 IST
ಬೆದರಿಸಿ ಅತ್ಯಾಚಾರ ಐವರ ಬಂಧನ
ಬೆದರಿಸಿ ಅತ್ಯಾಚಾರ ಐವರ ಬಂಧನ   

ಆನೇಕಲ್‌: ಪ್ರೇಮಿಯೊಂದಿಗೆ ಏಕಾಂತದಲ್ಲಿದ್ದಾಗ ವಿಡಿಯೊ ಮಾಡಿರುವುದಾಗಿ ಹೇಳಿದ್ದ ಗುಂಪೊಂದು, ಅದನ್ನು ಪೋಷಕರಿಗೆ ತೋರಿಸುವುದಾಗಿ ಬೆದರಿಕೆ ಹಾಕಿ ಅತ್ಯಾಚಾರ ನಡೆಸಿದೆ ಎಂದು ಆರೋಪಿಸಿ ಯುವತಿಯೊಬ್ಬರು ಆನೇಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಆರೋಪಿಗಳಾದ ಗೌರೇನಹಳ್ಳಿ ಗೌಸ್, ವಿಕಾಸ್, ರಮೇಶ್, ಯತಿರಾಜ್, ಮುರುಗೇಶ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಆರೋಪಿಗಳು ಯುವತಿಯ ಹಾಗೂ ಪ್ರಿಯಕರನ ಏಕಾಂತದ ವಿಡಿಯೊ ಮಾಡಿರುವುದಾಗಿ ಬೆದರಿಸಿ ಕಳೆದ ಆರು ತಿಂಗಳಿನಿಂದ ಸಾಮೂಹಿಕ ಅತ್ಯಾಚಾರ ನಡೆಸಿದ್ದರು ಎನ್ನಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.