ADVERTISEMENT

ಬೆಲೆ ಏರಿಕೆ: ಮುಷ್ಕರಕ್ಕೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2012, 18:30 IST
Last Updated 11 ನವೆಂಬರ್ 2012, 18:30 IST

ಬೆಂಗಳೂರು: `ಬೆಲೆ ಏರಿಕೆ ನಿಯಂತ್ರಣ ಸೇರಿದಂತೆ ಹಲವು ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಫೆಬ್ರುವರಿ 20 ಮತ್ತು 21ರಂದು ದೇಶವ್ಯಾಪಿ ಮುಷ್ಕರನಡೆಸಲಾಗುವುದು~ ಎಂದು ಟಿ.ಯು.ಸಿ.ಸಿ ಯ ಅಧ್ಯಕ್ಷ ಜಿ.ಅರ್. ಶಿವಶಂಕರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಕೇಂದ್ರ ಕಾರ್ಮಿಕ ಸಂಘಟನೆಗಳಾದ ಬಿಎಂಎಸ್, ಐಎನ್‌ಟಿಯುಸಿ, ಎಐಟಿಯುಸಿ, ಎಚ್‌ಎಂಎಸ್ ಮತ್ತಿತರ 11 ಕಾರ್ಮಿಕ ಸಂಘಟನೆಗಳು ಈಮುಷ್ಕರದಲ್ಲಿ ಭಾಗವಹಿಸಲಿವೆ~ ಎಂದರು.

`ಕಾರ್ಮಿಕ ಕಾನೂನುಗಳ ಸಮರ್ಪಕ ಅನುಷ್ಠಾನ, ಗುತ್ತಿಗೆ ಕಾರ್ಮಿಕ ಪದ್ದತಿ ರದ್ದತಿ, ಕಾರ್ಮಿಕರಿಗೆ 10 ಸಾವಿರ ರೂಪಾಯಿ ಕನಿಷ್ಠ ವೇತನ, ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ಬಂಡವಾಳ ಹೂಡಿಕೆ ರದ್ದತಿ ಸೇರಿದಂತೆ ಹಲವು ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ~ ಎಂದು ಹೇಳಿದರು.

ಈ ಕುರಿತು ಚರ್ಚಿಸಲು ನವೆಂಬರ್ 17 ರಂದು ನಗರದ ಆನಂದರಾವ್ ವೃತ್ತದ ಬಳಿಯಿರುವ ಕೆ.ಇ.ಬಿ. ಸಭಾ ಭವನದಲ್ಲಿ ಕಾರ್ಮಿಕ ಸಂಘಗಳ ಜಂಟಿ ಸಮಾವೇಶವನ್ನು ಏರ್ಪಡಿಸಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.