ADVERTISEMENT

ಭಾವಸಾರ ಕ್ಷತ್ರಿಯ ವಧು ವರರ ಸಮಾವೇಶ

​ಪ್ರಜಾವಾಣಿ ವಾರ್ತೆ
Published 2 ಜೂನ್ 2011, 20:20 IST
Last Updated 2 ಜೂನ್ 2011, 20:20 IST

ಬೆಂಗಳೂರು:  ನಗರದ ಮಲ್ಲೇಶ್ವರಂ ಭಾವಸಾರ ಕ್ಷತ್ರಿಯ ಸೇವಾ ಸಮಾಜವು ಏರ್ಪಡಿಸಿದ್ದ 23ನೇ ವಧು -ವರರ ಸಮಾವೇಶವು ಯಶಸ್ವಿಯಾಗಿ ನಡೆಯಿತು.ದಾವಣಗೆರೆಯ ಖ್ಯಾತ ವೈದ್ಯ ಡಾ. ಕೃಷ್ಣಾ ನವಲೆ ಅವರು ಮುಖ್ಯ ಅತಿಥಿಗಳಾಗಿದ್ದರು. ಬಿ. ಕೆ. ಸೇವಾ ಸಮಾಜದ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.

ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಸಮಾಜ ಬಾಂಧವರು ಸಮಾವೇಶದಲ್ಲಿ ಭಾಗವಹಿಸಿದ್ದರು. ಬಾಳ ಸಂಗಾತಿ ಆಯ್ಕೆ ಮಾಡಿಕೊಳ್ಳಲು ಆಗಮಿಸಿದ್ದ ಯುವಕ - ಯುವತಿಯರು ತಮ್ಮ ಆಸಕ್ತಿಗಳನ್ನು ಹೇಳಿಕೊಂಡರು.

ಸಮಾಜದ ಅಧ್ಯಕ್ಷ ಸಂತುರಾಮರಾವ್ ಪಿಸ್ಸೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಶ್ರೀಪಾದ ಸುಲಾಖೆ, ಖಜಾಂಚಿ ವಿಶ್ವನಾಥರಾವ್ ವಾವ್ಳೆ ಮತ್ತು ನಿರ್ದೇಶಕ ಸುಧೀರ್ ಎಸ್. ನವಲೆ ಉಪಸ್ಥಿತರಿದ್ದರು.

ಸಮಾಜದ ಮುಖಂಡರಾದ ಕೆ.ಎನ್. ವಿಶ್ವನಾಥರಾವ್, ನಾಗೇಂದ್ರರಾವ್  ಅಂಬೇಕರ್, ವಿಠ್ಠಲರಾವ್ ಗುಜ್ಜರ್, ಪಿ. ಎನ್. ನಾಗರಾಜ್, ಗಂಗಾಧರ ದೇವಗಿರಿ, ಗುಣಶೇಖರ ಪಿಸ್ಸೆ, ಜನಾರ್ದನ ಜಿಂಗಾಡೆ, ನಾಗರಾಜ್ ಪಿಸ್ಸೆ, ಸತ್ಯನಾರಾಯಣರಾವ್, ಗೋವಿಂದರಾವ್, ದೇವೇಂದ್ರ ಮತ್ತು ಯೋಗೇಂದ್ರ ವರ್ಣೆ ಅವರಲ್ಲದೇ,  ಯುವಕ ಮಂಡಳ ಮತ್ತು ಮಹಿಳಾ ಮಂಡಳದ ಸದಸ್ಯರೂ ಸಮಾವೇಶದ ಯಶಸ್ಸಿಗೆ ಸಹಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.