ADVERTISEMENT

ಮಕ್ಕಳಿಗೆ ಪಠ್ಯೇತರ ಜ್ಞಾನ ಮುಖ್ಯ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2012, 18:40 IST
Last Updated 13 ನವೆಂಬರ್ 2012, 18:40 IST

ಕೆಂಗೇರಿ: `ಮಕ್ಕಳು ಹೊರಗಿನ ಜನಗಳೊಟ್ಟಿಗೆ ಬೆರೆತು ಅವರಲ್ಲಿರುವ ಸಾಮಾನ್ಯ ಜ್ಞಾನ ವೃದ್ಧಿಯಾಗಿ ಸಮಾಜಕ್ಕೆ ಪೂರಕವಾದ ವ್ಯಕ್ತಿಯಾಗುತ್ತಾರೆ. ಪಠ್ಯ ಪುಸ್ತಕವನ್ನಷ್ಟೇ ಓದಿದರೆ ಮುಂದೆ ದುಡಿಯುವ ಯಂತ್ರವಾಗುತ್ತಾರೆಯೇ ಹೊರತು ಮಾನವೀಯ ಸಂಬಂಧಗಳು ಮಕ್ಕಳಲ್ಲಿ ಇಲ್ಲದಂತಾಗುತ್ತವೆ~ ಎಂದು ಅವರು ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು.

ಮಾಗಡಿ ರಸ್ತೆಯ ತುಂಗಾನಗರದಲ್ಲಿ ಜನ್ಮ ಭೂಮಿ ರಕ್ಷಣಾ ಪಡೆ, ರಾಜಧಾನಿ ಗೆಳೆಯರ ಬಳಗ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ, ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಭಾರತಿ ವೆಂಕಟೇಶ್, ಯಶವಂತಪುರ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಎಚ್.ಎಲ್.ಕೃಷ್ಣಪ್ಪ, ಬೆಂಗಳೂರು ನಗರ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಧನಲಕ್ಷ್ಮಿ, ಕಾಯದರ್ಶಿ ಎನ್.ಕೆ.ಮಂಜುಳಾ, ಬಿಜೆಪಿ ವಾರ್ಡ್ ಮಹಿಳಾ ಅಧ್ಯಕ್ಷರಾದ ಮಂಜುಳಾ, ಪುಟ್ಟಮ್ಮ, ಲತಾ, ರಘುನಾಥಯ್ಯ, ಗಂಗನರಸಯ್ಯ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.