ADVERTISEMENT

ಮಕ್ಕಳ ಆಸಕ್ತಿ ಗುರುತಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 19:30 IST
Last Updated 13 ಫೆಬ್ರುವರಿ 2011, 19:30 IST

ಪೀಣ್ಯ ದಾಸರಹಳ್ಳಿ:  ಮಕ್ಕಳ ಆಸಕ್ತಿಗೆ ಅನುಗುಣವಾಗಿ ಆಯಾಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಪೋಷಕರು ಪ್ರೋತ್ಸಾಹ ನೀಡಬೇಕು ಎಂದು ವಿಧಾನ ಪರಿಷತ್ತಿನ ಸದಸ್ಯ ಇ.ಕೃಷ್ಣಪ್ಪ ಅಭಿಪ್ರಾಯಪಟ್ಟರು.ತುಮಕೂರು ರಸ್ತೆಯ ಅಂಚೆಪಾಳ್ಯದ ವಿಶಾಲ್ ಆಂಗ್ಲಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ‘ಸಂಭ್ರಮ- 2011’ದಲ್ಲಿ ಅವರು ಮಾತನಾಡಿದರು.

‘ಮಕ್ಕಳ ಪ್ರತಿಭೆ ಹೊರ ಜಗತ್ತಿಗೆ ಪರಿಚಯವಾದಾಗ, ಎತ್ತರಕ್ಕೆ ಬೆಳೆದಾಗ ಆ ಮಕ್ಕಳ ಪೋಷಕರಿಗೆ ಮಾತ್ರವಲ್ಲದೇ ಆಯಾ ಶಾಲೆ ಮತ್ತು ಪ್ರದೇಶಕ್ಕೂ ಕೀರ್ತಿ ಬರುತ್ತದೆ’ ಎಂದು ಅವರು ಹೇಳಿದರು.ಜಿಲ್ಲಾ ಪಂಚಾಯಿತಿ ಸದಸ್ಯೆ ಜಲಜಾಕ್ಷಮ್ಮ ಸಿದ್ಧಗಂಗಯ್ಯ, ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ಪ ಮಾತನಾಡಿದರು. ಕಿರುತೆರೆ ‘ರಿಯಾಲಿಟಿ ಶೋ’ಗಳ ಬಹುಮಾನಿತರಾದ ರೋಹನ್ ಗೌಡ, ನಯನಾ, ಗ್ರಾಮ ಪಂಚಾಯಿತಿ ಸದಸ್ಯರಾದ ಗೌರಮ್ಮ ರಾಮಣ್ಣ, ಶಾಂತಾ ಉದಯ್‌ಕುಮಾರ್, ನರಸಿಂಹ ಮೂರ್ತಿ, ದೇವರಾಜ್, ಸೂಡಿ ಸುರೇಶ್, ಶ್ರೆಕಂಠಪ್ಪ, ಕುಮಾರ್, ಶಾಲೆಯ ಅಧ್ಯಕ್ಷ ಟಿ.ಕೆ.ನರಸೇಗೌಡ, ಕಾರ್ಯದರ್ಶಿ ವಿಜಯಲಕ್ಷ್ಮಿ, ಮುಖ್ಯ ಶಿಕ್ಷಕಿ ವಿಶ್ವೇಶ್ವರ ಮೆನನ್ ಇತರರು ಹಾಜರಿದ್ದರು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.