ADVERTISEMENT

ಮಕ್ಕಳ ಹಕ್ಕು: ವೆಬ್‌ಸೈಟ್‌ನಲ್ಲಿ ದೂರು

​ಪ್ರಜಾವಾಣಿ ವಾರ್ತೆ
Published 19 ಜೂನ್ 2013, 20:07 IST
Last Updated 19 ಜೂನ್ 2013, 20:07 IST

ಬೆಂಗಳೂರು: ಮಕ್ಕಳ ಹಕ್ಕುಗಳಿಗೆ ಚ್ಯುತಿ ಬಂದ ಸಂದರ್ಭದಲ್ಲಿ ಆ ಬಗ್ಗೆ ದೂರು ನೀಡುವುದು ಇನ್ನುಮುಂದೆ ಸುಲಭವಾಗಲಿದೆ. ಮಕ್ಕಳ ಹಕ್ಕುಗಳಿಗೆ ಧಕ್ಕೆಯಾದ ಸಂದರ್ಭಗಳಲ್ಲಿ ದೂರು ದಾಖಲಿಸಲು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ತನ್ನ ವೆಬ್‌ಸೈಟ್‌ನಲ್ಲಿ ಅವಕಾಶ ಕಲ್ಪಿಸಿದೆ. ಈ ವರೆಗೆ ವೆಬ್‌ಸೈಟ್‌ನಲ್ಲಿ 100 ದೂರುಗಳು ದಾಖಲಾಗಿವೆ.

ವೆಬ್‌ಸೈಟ್‌ನ ಕಾರ್ಯ ನಿರ್ವಹಣೆಯ ಬಗ್ಗೆ ಮಾತನಾಡಿದ ಆಯೋಗದ ಸದಸ್ಯ ಕಾರ್ಯದರ್ಶಿ ಯು.ಬಸವರಾಜು, `ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ,  ಮಕ್ಕಳ ಹಕ್ಕುಗಳ ಉಲ್ಲಂಘನೆಯಾದಾಗ ಜನರು ಮಾಹಿತಿ ನೀಡಲು ಸುಲಭವಾಗುವಂತೆ ವೆಬ್‌ಸೈಟ್ ರೂಪಿಸಲಾಗಿದೆ' ಎಂದು ತಿಳಿಸಿದರು.

`ದೂರಿನ ಬಗ್ಗೆ ವಿವರಿಸಲು ವೆಬ್‌ಸೈಟ್‌ನಲ್ಲಿಯೇ ಅವಕಾಶವನ್ನು ಕಲ್ಪಿಸಲಾಗಿದೆ. ಮಕ್ಕಳ ಮೇಲಿನ ದೌರ್ಜನ್ಯ, ದೌರ್ಜನ್ಯದ ಸ್ವರೂಪ ಹಾಗೂ ದೌರ್ಜನ್ಯ ಎಸಗಿದವರ ಮಾಹಿತಿಗಳನ್ನು ವೆಬ್‌ಸೈಟ್‌ನ ದೂರು ವಿಭಾಗದಲ್ಲಿ ದಾಖಲಿಸಬಹುದು' ಎಂದರು.
ವೆಬ್‌ಸೈಟ್‌ನ ವಿಳಾಸ : www.kscpcr.com www.kscpcr.com

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.