ADVERTISEMENT

ಮತದಾನ ಕುರಿತು ಕಲಾಜಾಥಾ ಆರಂಭ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 20:02 IST
Last Updated 23 ಏಪ್ರಿಲ್ 2013, 20:02 IST
ಬಿಬಿಎಂಪಿ ಚುನಾವಣಾ ಆಯೋಗದ ಸಹಯೋಗದೊಂದಿಗೆ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ `ಮತ ಚಲಾವಣೆ' ಕುರಿತ ಅಣುಕು ಅಭಿಯಾನ ಕಾರ್ಯಕ್ರಮದಲ್ಲಿ ಪಾಲಿಕೆ ಜಂಟಿ ಆಯುಕ್ತ (ದಕ್ಷಿಣ) ತ್ರಿಲೋಕ್ ಚಂದ್ರ,  ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ, ಆಯುಕ್ತ ಎಚ್.ಸಿದ್ಧಯ್ಯ ಮತ ಚಲಾಯಿಸಿದರು

ಬೆಂಗಳೂರು:  ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಸಾರ್ವಜನಿಕರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು ಆರಂಭಿಸಿದ ಕಲಾ ಜಾಥಾ ಅಭಿಯಾನಕ್ಕೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಸಿದ್ದಯ್ಯ ತಮಟೆ ಬಾರಿಸುವ ಮೂಲಕ ಸೋಮವಾರ ಚಾಲನೆ ನೀಡಿದರು.

ಒಟ್ಟು 18 ಕಲಾತಂಡ ರಚಿಸಲಾಗಿದ್ದು, ಈ ತಂಡಗಳು ಮತದಾರರಲ್ಲಿ ನಾಟಕ ಹಾಗೂ ವಿವಿಧ ಕಲಾ ಜಾಥಾ ಕಾರ್ಯಕ್ರಮಗಳ ಮೂಲಕ ಮತದಾನದ ಸಂದೇಶ ಸಾರಲಿವೆ. ಸದರಿ ತಂಡಗಳು ಬಸ್ ನಿಲ್ದಾಣ, ಮಾರುಕಟ್ಟೆ, ಉದ್ಯಾನವನ, ಮಾಲ್‌ಗಳು, ಐಟಿ-ಬಿಟಿ ಕಂಪೆನಿಗಳ ಆವರಣ, ಅಪಾರ್ಟ್‌ಮೆಂಟ್ ಹಾಗೂ ಪ್ರಮುಖ ವೃತ್ತಗಳಲ್ಲಿ ಹಾಡು, ನಾಟಕ, ರೂಪಕಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಿವೆ ಎಂದು ತಿಳಿಸಿದರು. ಚುನಾವಣಾ ಆಯೋಗ ಮತದಾರರಲ್ಲಿ ಜಾಗೃತಿ ಮೂಡಿಸಲು ವ್ಯಾಪಕ ಕ್ರಮ ಹಾಕಿಕೊಂಡಿದೆ.

ಜಾನಪದ ಗಾಯಕ ಜೋಗಿಲ ಸಿದ್ಧರಾಜು ತಂಡಗಳ ನಿರ್ವಹಣೆ ಮಾಡಲಿದ್ದಾರೆ. ಮತದಾನ ಸಮೀಪಿಸುವವರೆಗೂ ಈ ತಂಡಗಳು ಹಲವಾರು ನಾಟಕಗಳನ್ನು ಪ್ರದರ್ಶಿಸಲಿದ್ದು, ಮತದಾನ ಮಾಡಲು ಪ್ರೇರೇಪಿಸಲಿವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.