ADVERTISEMENT

ಮರಗಳ ಉಳಿಸಲು ವಿಭಿನ್ನ ರೀತಿಯ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2017, 19:43 IST
Last Updated 11 ಜೂನ್ 2017, 19:43 IST
ನಗರದ ಹಸಿರನ್ನು ಕಾಪಾಡಲು ಹಮ್ಮಿಕೊಂಡಿದ್ದ ಪ್ರತಿಭಟನೆ ಅಂಗವಾಗಿ ನಡೆದ ಫ್ಯಾಷನ್‌ ಷೊನಲ್ಲಿ ವಸ್ತ್ರ ವಿನ್ಯಾಸಕಾರ ಪ್ರಸಾದ್‌ ಬಿದ್ದಪ್ಪ ಅವರು ರೂಪಿಸಿದ ಪರಿಸರ ಸ್ನೇಹಿ ವಸ್ತ್ರಗಳನ್ನು ರೂಪದರ್ಶಿಯರು ಪ್ರದರ್ಶಿಸಿದರು  –ಪ್ರಜಾವಾಣಿ ಚಿತ್ರ
ನಗರದ ಹಸಿರನ್ನು ಕಾಪಾಡಲು ಹಮ್ಮಿಕೊಂಡಿದ್ದ ಪ್ರತಿಭಟನೆ ಅಂಗವಾಗಿ ನಡೆದ ಫ್ಯಾಷನ್‌ ಷೊನಲ್ಲಿ ವಸ್ತ್ರ ವಿನ್ಯಾಸಕಾರ ಪ್ರಸಾದ್‌ ಬಿದ್ದಪ್ಪ ಅವರು ರೂಪಿಸಿದ ಪರಿಸರ ಸ್ನೇಹಿ ವಸ್ತ್ರಗಳನ್ನು ರೂಪದರ್ಶಿಯರು ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದ  ಹಸಿರನ್ನು ಕಾಪಾಡಲು ‘ನೈಟ್ಸ್‌ ಆಫ್‌ ಕ್ವೀನ್ಸ್‌’ ಸಂಘಟನೆ ಕಾರ್ಯಕರ್ತರು ಭಾನುವಾರ ಬೆಳಿಗ್ಗೆಯೇ ಕ್ಷೀನ್ಸ್‌ ರಸ್ತೆಯ ಸರ್ಕಾರಿ ಪಶುವೈದ್ಯಕೀಯ ಆಸ್ಪತ್ರೆ ಆವರಣದಲ್ಲಿ ಗುಂಪುಗೂಡಿ ಕಲೆ–ಸಂಸ್ಕೃತಿ ಮೂಲಕ ಪ್ರತಿಭಟನೆ ನಡೆಸಿದರು.

ಶತಮಾನದಷ್ಟು ಹಳೆಯದಾದ ಕಟ್ಟಡವನ್ನು ಕೆಡವಿ, ಎರಡು ಅಂತಸ್ತಿನ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಪಶುವೈದ್ಯಕೀಯ ವಿಭಾಗವು ಪ್ರಸ್ತಾವ ಸಲ್ಲಿಸಿದೆ. ಆದರೆ, ಕಟ್ಟಡ ಕಟ್ಟಲು ಉದ್ದೇಶಿಸಿರುವ ಆವರಣದಲ್ಲಿ ಸಾಕಷ್ಟು ಹಳೆಯ ಮರಗಳಿವೆ.

ಸಂಘಟನೆಯ ಕಾರ್ಯಕರ್ತರು ಕಲೆ, ಕವಿತೆ, ಸಂಗೀತ ಮತ್ತು ಫ್ಯಾಷನ್‌ ಷೊ ಮೂಲಕ ತಮ್ಮ ವಿರೋಧ ವ್ಯಕ್ತಪಡಿಸಿದರು. ಸುಮಾರು 200 ಮಂದಿ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.  ಸಾಕಷ್ಟು ಮಕ್ಕಳು ಇದರಲ್ಲಿ ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.