ADVERTISEMENT

‘ಮಹಾ ಪದವಿ’ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2019, 19:22 IST
Last Updated 6 ಆಗಸ್ಟ್ 2019, 19:22 IST

ಬೆಂಗಳೂರು:ಅಟ್ಟಕ್ಕಲರಿ ಡಿಪ್ಲೊಮಾ ಇನ್ ಮೂವ್‌ಮೆಂಟ್ ಆರ್ಟ್ಸ್ ಸಂಸ್ಥೆಯ ಮಿಕ್ಸ್‌ಡ್‌ ಮೀಡಿಯಾದ 13ನೇ ತಂಡದ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವನ್ನು ಚೌಡಯ್ಯ ಸ್ಮಾರಕ ಭವನದಲ್ಲಿ ಇದೇ 9 ಮತ್ತು 10ರಂದು ಸಂಜೆ 6ಕ್ಕೆ ಏರ್ಪಡಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದ ಸಂಸ್ಥೆಯ ಕಲಾ ನಿರ್ದೇಶಕ ಜಯಚಂದ್ರ ಪಿ., ‘ಕಾರ್ಯಕ್ರಮದಲ್ಲಿ 60 ನೃತ್ಯಗಾರರು ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ಇಟಲಿಯ ಹೆಸರಾಂತ ನೃತ್ಯ ಸಂಯೋಜಕ ಸ್ಟಿಫಾನೊ ಫರ್ಡೆಲಿ, ಸ್ವಿಟ್ಜರ್ಲೆಂಡ್‌ನ ಥೆರೆಸಾ ರೊಟೆಂಬರ್ಗ್, ಸ್ಪೇನ್‌ನ ಅಯಾನ್ ಗಾರ್ನಿಕ್‌ ಅವರಿಂದಲೂ ಪ್ರದರ್ಶನಗಳು ನಡೆಯಲಿವೆ. ಕಳರಿಪಯಟ್ಟು ಸಮರಕಲೆ ಹಾಗೂ ಭರತ
ನಾಟ್ಯದ ಗುಂಪು ಸಂಯೋಜನೆ ಸಹ ಇರಲಿದೆ’ ಎಂದರು.

‘ಸಂಸ್ಥೆಯು ನೃತ್ಯಗಾರರಿಗೆ ವೃತ್ತಿಪರ ಮತ್ತು ಸಮಗ್ರ ತರಬೇತಿ ನೀಡುವ ಉದ್ದೇಶದಿಂದ 2006ರಲ್ಲಿ ಈ ಡಿಪ್ಲೊಮಾ ಕಾರ್ಯಕ್ರಮವನ್ನು ಆರಂಭಿಸಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.