ADVERTISEMENT

ಮಹಿಳೆಯರಿಗೆ ಮೀಸಲಾದ ಬಾಗಿಲು ಬಳಸುವ ಪುರುಷರು

‘ನಮ್ಮಮೆಟ್ರೊ’: ಪಾಲನೆ ಆಗುತ್ತಿಲ್ಲ ನಿಯಮ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2018, 19:30 IST
Last Updated 1 ಏಪ್ರಿಲ್ 2018, 19:30 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಬೆಂಗಳೂರು: ‘ನಮ್ಮ ಮೆಟ್ರೊ’ ರೈಲುಗಳ ಮೊದಲ ಬೋಗಿಯ ಮೊದಲ ಎರಡು ಬಾಗಿಲುಗಳು ಮಹಿಳೆಯರಿಗೆ ಮೀಸಲು ಎಂಬ ನಿಯಮ ಸರಿಯಾಗಿ ಪಾಲನೆ ಆಗುತ್ತಿಲ್ಲ. ಮಹಿಳಾ ಪ್ರಯಾಣಿಕರ ಜೊತೆಯಲ್ಲಿ ಬರುವ ಪುರುಷರೂ ಇವುಗಳನ್ನು ಬಳಸುತ್ತಿದ್ದಾರೆ.

ಬೆಂಗಳೂರು ಮೆಟ್ರೊ ರೈಲು ನಿಗಮವು ಸದ್ಯಕ್ಕೆ ಮಹಿಳೆಯರಿಗಾಗಿ ಪ್ರತ್ಯೇಕ ಕೋಚ್‌ಗಳನ್ನು ಮೀಸಲಿಟ್ಟಿಲ್ಲ. ಆದರೆ, ಮಹಿಳೆಯರು ಮೆಟ್ರೊ ಹತ್ತಿ ಇಳಿಯಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಎರಡು ಬಾಗಿಲುಗಳನ್ನು ಮಾತ್ರ ಅವರಿಗೆ ಮೀಸಲಿಟ್ಟಿದೆ. ನಿಲ್ದಾಣದಲ್ಲಿ ಅವರು ರೈಲು ಹತ್ತಲು ಕಾಯ್ದಿರಿಸಿದ ಜಾಗದಲ್ಲಿ ಸೂಚನಾ ಫಲಕಗಳನ್ನೂ ಅಳವಡಿಸಲಾಗಿದೆ.

ದಟ್ಟಣೆ ಹೆಚ್ಚು ಇರುವ ಅವಧಿಯಲ್ಲಿ ಮಾತ್ರ ನಿಲ್ದಾಣದ ಭದ್ರತಾ ಸಿಬ್ಬಂದಿ ಈ ನಿಯಮದ ಬಗ್ಗೆ ಪ್ರಯಾಣಿಕರಿಗೆ ನೆನಪಿಸುತ್ತಾರೆ. ಮೀಸಲಿಟ್ಟ ಬಾಗಿಲುಗಳಲ್ಲಿ ಪುರುಷರು ರೈಲು ಪ್ರವೇಶಿಸದಂತೆ ತಡೆಯುತ್ತಾರೆ. ಉಳಿದ ವೇಳೆ ಅವರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ.

ADVERTISEMENT

‘ಮಹಿಳೆಯರ ಪ್ರವೇಶಕ್ಕೆ ಮೀಸಲಿಟ್ಟ ಬಾಗಿಲುಗಳನ್ನು ಅನ್ಯರು ಬಳಸುವುದಕ್ಕೆ ಸಿಬ್ಬಂದಿ ಅವಕಾಶ ಕಲ್ಪಿಸಬಾರದು’ ಎಂದು ಮೈಸೂರು ರಸ್ತೆ ಮೆಟ್ರೊ ನಿಲ್ದಾಣದಿಂದ ನಿತ್ಯವೂ ಪ್ರಯಾಣಿಸುವ ಎ.ರಾಜಮ್ಮ ಒತ್ತಾಯಿಸಿದರು.

‘ನಿಯಮ ಪಾಲಿಸುವಂತೆ ಪುರುಷ ಪ್ರಯಾಣಿಕರಿಗೆ ತಿಳಿ ಹೇಳುತ್ತೇವೆ. ಆದರೆ, ನಿಯಮ ಉಲ್ಲಂಘಿಸುವವರ ವಿರುದ್ಧ ಏನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ನಮಗೂ ಸ್ಪಷ್ಟ ನಿರ್ದೇಶನ ಇಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ನಿಲ್ದಾಣದ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
**
‘ನಮ್ಮ ಮೆಟ್ರೊ’ ರೈಲುಗಳ ಮೊದಲ ಬೋಗಿಯ ಮೊದಲ ಎರಡು ಬಾಗಿಲುಗಳು ಮಹಿಳೆಯರಿಗೆ ಮೀಸಲು ಎಂಬ ನಿಯಮ ಸರಿಯಾಗಿ ಪಾಲನೆ ಆಗುತ್ತಿಲ್ಲ. ಮಹಿಳಾ ಪ್ರಯಾಣಿಕರ ಜೊತೆಯಲ್ಲಿ ಬರುವ ಪುರುಷರೂ ಇವುಗಳನ್ನು ಬಳಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.