ADVERTISEMENT

ಮಾದಕ ವ್ಯಸನ ಜಾಗೃತಿ ಅಗತ್ಯ: ಕುಂಬ್ಳೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2014, 19:30 IST
Last Updated 19 ಮಾರ್ಚ್ 2014, 19:30 IST

ಬೆಂಗಳೂರು:  ‘ಮಕ್ಕಳು ಮಾದಕ ವ್ಯಸನಿಗಳಾಗಿ ಪರಿ ವರ್ತನೆ ಆಗದಂತೆ ನೋಡುವ ಹೊಣೆಗಾರಿಕೆ ಪಾಲ ಕರ ಮೇಲಿದೆ. ಸದಾ ಅವರನ್ನು ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ಮಾದಕ ದ್ರವ್ಯಗಳ ಕಡೆಗೆ ಮನಸ್ಸು ಹರಿಯದಂತೆ ನೋಡಿಕೊಳ್ಳಬೇಕಿದೆ’ ಎಂದು ಹಿರಿಯ ಕ್ರಿಕೆಟ್‌ ಆಟಗಾರ ಅನಿಲ್‌ ಕುಂಬ್ಳೆ ಸಲಹೆ ನೀಡಿದರು.

ಎಂ.ಎಸ್‌. ರಾಮಯ್ಯ ತಾಂತ್ರಿಕ ಸಂಸ್ಥೆಯಲ್ಲಿ ಬುಧವಾರ ಏರ್ಪಡಿಸಿದ್ದ ಮಾದಕ ವ್ಯಸನದ ವಿರುದ್ಧ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ‘ಕಾಲೇಜಿನ ದಿನಗಳಲ್ಲಿ ಈ ವ್ಯಸನಗಳ ಕಡೆಗೆ ಜಾರುವ ಅಪಾಯ ಹೆಚ್ಚಾಗಿದ್ದು, ವಿದ್ಯಾರ್ಥಿಗಳು ಜಾಗೃತರಾಗಿರಬೇಕು’ ಎಂದು ಕಿವಿಮಾತು ಹೇಳಿದರು.

ನಟ ವಿಜಯ್‌ ರಾಘವೇಂದ್ರ, ‘ಮಾದಕ ವ್ಯಸನಗಳಿಗೆ ನಮ್ಮ ದೇಹವನ್ನು ಪ್ರಯೋಗಕ್ಕೆ ಒಡ್ಡ ಬಾರದು’ ಎಂದು ತಿಳಿಸಿದರು. ‘ಯುವ ಸಮುದಾಯ ಕುಂಬ್ಳೆ ಅವರನ್ನು ಆದರ್ಶವಾಗಿ ತೆಗೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಆರ್ಥಿಕ ಅಪರಾಧ ವಿಭಾಗದ ಡಿಐಜಿ ಡಿ.ರೂಪಾ ಮಾದಕ ದ್ರವ್ಯಗಳ ದುಷ್ಪರಿಣಾಮದ ಬಗೆಗೆ ವಿವರಿಸಿದರು. ನಿಮ್ಹಾನ್ಸ್‌ ತಜ್ಞ ವೈದ್ಯರು ಉಪನ್ಯಾಸ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.