ADVERTISEMENT

ಮಾರುತಿ- ಯಾಕೆ ಹೀಂಗೆ ಹಾರುತಿ!

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2011, 19:45 IST
Last Updated 9 ಫೆಬ್ರುವರಿ 2011, 19:45 IST
ಮಾರುತಿ- ಯಾಕೆ ಹೀಂಗೆ ಹಾರುತಿ!
ಮಾರುತಿ- ಯಾಕೆ ಹೀಂಗೆ ಹಾರುತಿ!   

ಬೆಂಗಳೂರು: ‘ಏರೊ ಇಂಡಿಯಾ’ ಪ್ರದರ್ಶನದಲ್ಲಿ ಅತ್ಯಾಧುನಿಕ ಯುದ್ಧವಿಮಾನಗಳ ಜೊತೆ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ‘ಮಾರುತಿ 800-ಹಾರಾಡುವ ಕಾರ್’ ಅನ್ನು ನೋಡುವ ಅವಕಾಶ ಲಭಿಸಿದೆ.

‘ಮಾರುತಿ 800’ ಕಾರಿಗೆ ವಿಮಾನದ ಮಾದರಿಯಲ್ಲಿ ರೆಕ್ಕೆ, ಗಾಲಿ ಹಾಗೂ ಎಂಜಿನ್ ಅಳವಡಿಸಿರುವ ಕಂಪೆನಿ ಬೆಂಗಳೂರು ಮೂಲದ್ದು ಎನ್ನುವುದು ವಿಶೇಷ.
‘ಬೆಂಗಳೂರಿಯನ್’ ಕಂಪೆನಿಯು ಅಭಿವೃದ್ಧಿಪಡಿಸಿರುವ ‘ಮಾರುತಿ-ಹಾರಾಡುವ ಕಾರ್’ಅನ್ನು ಕೇವಲ ಪ್ರದರ್ಶನಕ್ಕೆಂದು ಇಡಲಾಗಿದೆ. ಹಾರಾಟ ನಡೆಸುವ ಅನುಮತಿ ಇದಕ್ಕೆ ದೊರೆತಿಲ್ಲ ಎಂದು ರಕ್ಷಣಾ ಇಲಾಖೆಯ ಉತ್ಪಾದನೆ ವಿಭಾಗದ ಕಾರ್ಯದರ್ಶಿ ರಾಜ್‌ಕುಮಾರ್ ಸಿಂಗ್ ತಿಳಿಸಿದ್ದಾರೆ.

ಅಭಿವೃದ್ಧಿಪಡಿಸಿದ ವ್ಯಕ್ತಿಯ ಹೆಸರನ್ನು ಹೇಳಲು ನಿರಾಕರಿಸಿದ ಅವರು, ‘ಮಾರುತಿ ಉದ್ಯೋಗ್ ಲಿಮಿಟೆಡ್ ಕಂಪೆನಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘ನಾಗರಿಕ ವಿಮಾನಯಾನದ ಪ್ರಧಾನ ನಿರ್ದೇಶಕರ (ಡಿಜಿಸಿಎ) ಅನುಮತಿ ದೊರೆಯದಿರುವುದರಿಂದ ಹಾರಾಟ ನಡೆಸಲು ಅವಕಾಶವಿಲ್ಲ. ಕೇವಲ ಪ್ರದರ್ಶನಕ್ಕೆಂದು ಇಡಲಾಗಿದೆ. ಆಸಕ್ತ ಜನರು ವೀಕ್ಷಿಸಬಹುದಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.