ADVERTISEMENT

ಮಾವು, ಹಲಸು ಮೇಳಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 22 ಮೇ 2018, 19:31 IST
Last Updated 22 ಮೇ 2018, 19:31 IST
ಮಾವು, ಹಲಸು ಮೇಳಕ್ಕೆ ಚಾಲನೆ
ಮಾವು, ಹಲಸು ಮೇಳಕ್ಕೆ ಚಾಲನೆ   

ಬೆಂಗಳೂರು: ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘದ (ಹಾಪ್‌ಕಾಮ್ಸ್‌) ವತಿಯಿಂದ ಮಾವು ಹಾಗೂ ಹಲಸಿನ ಮೇಳಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.

ತೋಟಗಾರಿಕಾ ಆಯುಕ್ತ ವೈ.ಎಸ್‌.ಪಾಟೀಲ ಅವರು ಹಡ್ಸನ್‌ ವೃತ್ತದಲ್ಲಿ ಆರಂಭವಾದ ಮೇಳವನ್ನು ಉದ್ಘಾಟಿಸಿದರು.

‘ಕಾರ್ಬೋಹೈಡ್ರೇಟ್ ಮುಕ್ತ ಗುಣಮಟ್ಟದ ಹಣ್ಣುಗಳನ್ನು ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಮೇಳ ಆರಂಭಿಸಲಾಗಿದೆ. ರೈತರಿಂದ ನೇರವಾಗಿ ಹಣ್ಣುಗಳನ್ನು ಖರೀದಿ ಮಾಡಿರುವುದರಿಂದ ಮಧ್ಯವರ್ತಿಗಳನ್ನು ತಡೆಯುವ ಕೆಲಸ ಆಗಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳ ರೈತರಿಂದ ಮಾವಿನ ಹಣ್ಣುಗಳನ್ನು ಖರೀದಿಸಿದ್ದೇವೆ’ ಎಂದು ಅವರು ಹೇಳಿದರು.

ADVERTISEMENT

ಹಾಪ್‌ಕಾಮ್ಸ್‌ ಅಧ್ಯಕ್ಷ ಚಂದ್ರೇಗೌಡ, ‘ಶೇ 10ರಷ್ಟು ರಿಯಾಯಿತಿ ದರದಲ್ಲಿ ನೀಡುತ್ತಿದ್ದೇವೆ. ವಾರಕ್ಕೊಂದು ಬಾರಿ ಗುಣಮಟ್ಟದ ತಪಾಸಣೆ ಮಾಡಲಿದ್ದೇವೆ. ಆದ್ದರಿಂದ ಈ ಹಣ್ಣುಗಳು ಆರೋಗ್ಯಕ್ಕೆ ಪೂರಕವಾಗಿವೆ. ಪ್ರತಿ ವರ್ಷ ಮೇಳದಲ್ಲಿ 750 ಟನ್ ಮಾವಿನ ಹಣ್ಣುಗಳ ವ್ಯಾಪಾರವಾಗುತ್ತದೆ. ಈ ಬಾರಿ 1000 ಟನ್‌ ಮಾರಾಟದ ನಿರೀಕ್ಷೆ ಇದೆ’ ಎಂದರು.

ಮಾವಿನಹಣ್ಣಿನ ಬೆಲೆ

ತಳಿ, ದರ (ಒಂದು ಕೆ.ಜಿಗೆ ₹ ಗಳಲ್ಲಿ)

ನಾಟಿ ಮಾವು, 40

ತೋತಾಪುರಿ, 30

ಸೆಂದೂರ, 50

ರಸಪುರಿ, 65

ಬೈಗಾನ್‌ಪಲ್ಲಿ, 60

ಕಾಲ ಪಾಡು, 95

ಮಲ್ಲಿಕಾ, 88

ಬಾದಾಮಿ (ಬಾಕ್ಸ್‌), 90

ಬಾದಾಮಿ, 78

ದಸೇರಿ, 115

ಮಲಗೋವ, 125

ಸಕ್ಕರೆಗುತ್ತಿ, 100

ಅಮರ್‌ಪಲ್ಲಿ, 75

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.