ADVERTISEMENT

ಮೂಲಸೌಕರ್ಯಕ್ಕಾಗಿ ಬೀದಿಗಿಳಿದ ಜನ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2018, 19:49 IST
Last Updated 10 ಮಾರ್ಚ್ 2018, 19:49 IST
ಮೂಲಸೌಕರ್ಯಕ್ಕಾಗಿ ಬೀದಿಗಿಳಿದ ಜನ
ಮೂಲಸೌಕರ್ಯಕ್ಕಾಗಿ ಬೀದಿಗಿಳಿದ ಜನ   

ಬೆಂಗಳೂರು: ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆಯನ್ನು ಶೀಘ್ರ ಒದಗಿಸಬೇಕು. ಇಲ್ಲಿನ ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಸಲು ತುರ್ತಾಗಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸ್ಥಳೀಯರು ಕಸವನಹಳ್ಳಿ ಮುಖ್ಯರಸ್ತೆಯಲ್ಲಿ ಶನಿವಾರ ಮಾನವ ಸರಪಣಿ ರಚಿಸಿ ಪ್ರತಿಭಟನೆ ನಡೆಸಿದರು.

ಕಸವನಹಳ್ಳಿ ಅಭಿವೃದ್ಧಿ ವೇದಿಕೆ (ಕೆಡಿಎಫ್‌) ನೇತೃತ್ವದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ 28 ವಸತಿ ಸಮುಚ್ಚಯಗಳ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದವರು ಭಾಗವಹಿಸಿದರು.

ಈ ಪ್ರದೇಶ ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಗೊಂಡು ದಶಕಗಳೇ ಕಳೆದರೂ ಇನ್ನೂ ಒಳಚರಂಡಿ ವ್ಯವಸ್ಥೆಕಲ್ಪಿಸಿಲ್ಲ. ಕಾವೇರಿ ನೀರಿನ ಸೌಲಭ್ಯವೂ ನಮಗಿಲ್ಲ ಎಂದು ವೇದಿಕೆಯ ಸಂಚಾಲಕ ವಿಷ್ಣುಪ್ರಸಾದ್‌ ತಿಳಿಸಿದರು.

ADVERTISEMENT

ಇಲ್ಲಿನ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಇಲ್ಲಿ ವಾಹನಗಳನ್ನು ಬೇಕಾಬಿಟ್ಟಿ ನಿಲ್ಲಿಸಲಾಗುತ್ತದೆ. ಹಾಗಾಗಿ ಸರ್ಜಾಪುರ ರಸ್ತೆ ಹಾಗೂ ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸುವ ಇಲ್ಲಿನ ಮುಖ್ಯರಸ್ತೆಯಲ್ಲಿ ಸದಾ ವಾಹನ ದಟ್ಟಣೆ ಇರುತ್ತದೆ ಎಂದು ಅವರು ದೂರಿದರು.

ಇಲ್ಲಿಗೆ ಬಸ್‌ ಸೌಕರ್ಯವೂ ಕಡಿಮೆ ಇರುವುದರಿಂದ ಟ್ಯಾಕ್ಸಿ ಅಥವಾ ಆಟೊ ರಿಕ್ಷಾಗಳನ್ನು ಅವಲಂಬಿಸಬೇಕಾದ ಸ್ಥಿತಿ ಇದೆ ಎಂದರು.

ಕಸವನಹಳ್ಳಿ ಅಭಿವೃದ್ಧಿ ವೇದಿಕೆಯ ಬೇಡಿಕೆಗಳು

* ಕಸವನಹಳ್ಳಿ ಮುಖ್ಯರಸ್ತೆಯನ್ನು 80 ಅಡಿ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಬೇಕು

* ಬಸ್‌ ಸೌಕರ್ಯ ಹೆಚ್ಚಿಸಬೇಕು

* ಪಾದಚಾರಿ ಮಾರ್ಗ ಅಭಿವೃದ್ಧಿಪಡಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.