ADVERTISEMENT

ಮೈಸೂರು- ಬೆಂಗಳೂರು ನಡುವೆ ವೇಗದ ರೈಲು

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2012, 19:30 IST
Last Updated 11 ಮಾರ್ಚ್ 2012, 19:30 IST

ಬೆಂಗಳೂರು: ಮೈಸೂರು- ಬೆಂಗಳೂರು ನಡುವೆ ಅತಿವೇಗದ ರೈಲು ಸಂಪರ್ಕ ಕಲ್ಪಿಸುವ ಸಾಧ್ಯತೆಗಳ ಕುರಿತು ಅಧ್ಯಯನ ನಡೆಸುವಂತೆ ರೈಲ್ವೆ ಇಲಾಖೆಯನ್ನು ಮನವೊಲಿಸುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ.

`ದೇಶದ ವಿವಿಧ ಭಾಗಗಳಲ್ಲಿ ಅತಿವೇಗದ ರೈಲು ಸಂಪರ್ಕ ಕಲ್ಪಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಹೊಂದಿದೆ. ಹಲವು ಸುತ್ತಿನ ಮಾತುಕತೆಗಳ ನಂತರ, ಮೈಸೂರು-ಬೆಂಗಳೂರು ನಡುವೆ ಅತಿವೇಗದ ರೈಲು ಸಂಪರ್ಕ ಕಲ್ಪಿಸುವ ಸಾಧ್ಯತೆ ಕುರಿತು ಅಧ್ಯಯನ ನಡೆಸಲು ಕೇಂದ್ರ ಸರ್ಕಾರದ ಮನ ಒಲಿಸಿದ್ದೇವೆ~ ಎಂದು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಮೈಸೂರು- ಬೆಂಗಳೂರು ನಡುವಿನ ರೈಲು ಸಂಪರ್ಕ ಹೊರತುಪಡಿಸಿ, ದೇಶದ ಪ್ರಮುಖ ವಾಣಿಜ್ಯ, ಪ್ರವಾಸಿ ಮತ್ತು ಧಾರ್ಮಿಕ ಕೇಂದ್ರಗಳ ನಡುವೆ ಅತಿವೇಗದ ರೈಲು ಸಂಪರ್ಕ ಕಲ್ಪಿಸುವ ಯೋಜನೆ ಹೊಂದಿದೆ.

ಪುಣೆ-ಮುಂಬೈ-ಅಹಮದಾಬಾದ್, ನವದೆಹಲಿ-ಚಂಡಿಗಢ-ಅಮೃತಸರ, ಹೌರಾ-ಹಲ್ದಿಯಾ, ಚೆನ್ನೈ-ಬೆಂಗಳೂರು-ಕೊಯಮತ್ತೂರು-ಕೊಚ್ಚಿ-ತಿರುವನಂತಪುರ, ನವದೆಹಲಿ-ಆಗ್ರಾ-ಲಕ್ನೊ, ಅಲಹಾಬಾದ್-ಪಟ್ನಾ ಹಾಗೂ ಹೈದರಾಬಾದ್-ದೋರಣಕಲ್-ವಿಜಯವಾಡ-ಚೆನ್ನೈ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.