ADVERTISEMENT

‘ಮೊಬೈಲ್‌ ನಿಂದ ಓದಿನ ಆಸಕ್ತಿಗೆ ಕುತ್ತು’

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2019, 19:44 IST
Last Updated 1 ಮಾರ್ಚ್ 2019, 19:44 IST

ಕೆ.ಆರ್.ಪುರ: ‘ಅತಿಯಾದ ಮೊಬೈಲ್ ಬಳಕೆಯಿಂದಾಗಿಇಂದಿನ ವಿದ್ಯಾರ್ಥಿಗಳು ಓದುವ ಆಸಕ್ತಿಯನ್ನೆ ಕಳೆದುಕೊಳುತ್ತಿದ್ದಾರೆ’ ಎಂದು ಪಿ.ಇ.ಎಸ್ ವಿಶ್ವವಿದ್ಯಾಲಯದ ಕುಲಪತಿ ಕೆ.ಎನ್.ಬಾಲಸುಬ್ರಹ್ಮಣ್ಯ ಮೂರ್ತಿ ಆತಂಕ ವ್ಯಕ್ತಪಡಿಸಿದರು.

ಕೆ.ಆರ್.ಪುರದ ಕೆಂಬ್ರಿಜ್‌ ತಾಂತ್ರಿಕ ಮಹಾವಿದ್ಯಾಲಯವು, ಕಂಪ್ಯೂಟರ್ ಸೊಸೈಟಿ ಆಫ್ ಇಂಡಿಯಾ(ಸಿಎಸ್ಐ) ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ತಂತ್ರಜ್ಞಾನ ಬಳಕೆಯಿಂದ ಮನುಷ್ಯನ ಜೀವಿತಾವಧಿ ಹೆಚ್ಚಾಗಿದ್ದು. ಬಹುತೇಕರು ದುಡಿಯಲು ಶಕ್ತರಾಗಿದ್ದಾರೆ. ಅದಕ್ಕೆ ತಕ್ಕಂತೆ ಆಧುನಿಕವ್ಯವಸ್ಥೆಗಳನ್ನು ರೂಪಿಸಬೇಕಾಗಿದೆ’ ಎಂದರು.

ADVERTISEMENT

‘ಇಂದಿನ ಪಠ್ಯ ವ್ಯವಸ್ಥೆಯಲ್ಲಿ ಯೋಚನಾ ವಿಧಾನಗಳು ಇಲ್ಲ. ವಿದ್ಯಾರ್ಥಿಗಳ ಅಧ್ಯಯನ ಸಮಯವು ದಿನಕ್ಕೆ ನಾಲ್ಕು ಗಂಟೆ ಇದ್ದದ್ದು, ಈಗ ಮೊಬೈಲ್‌ಗಳಿಂದಾಗಿ ವಾರಕ್ಕೆ ನಾಲ್ಕು ಗಂಟೆಗೆ ಇಳಿದಿದೆ’ ಎಂದರು.

ಕೆಂಬ್ರಿಜ್‌ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಿ.ಕೆ.ಮೋಹನ್‌ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.