ADVERTISEMENT

ಮೌಲ್ಯಮಾಪನ ಶಿಕ್ಷಕರಿಗೆ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 20:07 IST
Last Updated 4 ಡಿಸೆಂಬರ್ 2012, 20:07 IST

ಬೆಂಗಳೂರು: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್ಸೆಸ್ಸೆಲ್ಸಿ ಮತ್ತು ಇತರ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಕಡ್ಡಾಯಗೊಳಿಸಲಾಗಿದೆ.

ಪ್ರತಿ ವರ್ಷ ಮೌಲ್ಯಮಾಪನ ಕಾರ್ಯಕ್ಕೆ ಶೇಕಡ 30ರಷ್ಟು ಶಿಕ್ಷಕರು ಗೈರು ಹಾಜರಾಗುವುದರಿಂದ ನಿಗದಿತ ಸಮಯದಲ್ಲಿ ಫಲಿತಾಂಶ ಪ್ರಕಟಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ಮನಗಂಡು ಸರ್ಕಾರದ ಅನುಮೋದನೆಯೊಂದಿಗೆ ಮೌಲ್ಯಮಾಪನ ಕಾರ್ಯವನ್ನು ಕಡ್ಡಾಯಗೊಳಿಸಲಾಗಿದೆ ಎಂದು ಮಂಡಳಿಯ ಪ್ರಕಟಣೆ ತಿಳಿಸಿದೆ.

ಮೌಲ್ಯಮಾಪನ ಕಾರ್ಯವನ್ನು ಕಡ್ಡಾಯವೆಂದು ಪರಿಗಣಿಸಿ ಕಳೆದ ತಿಂಗಳ 22ರಂದು ಆದೇಶ ಹೊರಡಿಸಲಾಗಿದೆ. ವಿವರಗಳ ವೆಬ್‌ಸೈಟ್ ವಿಳಾಸ: www.kseeb.kar.nic.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.