ಯಲಹಂಕ: ಯುವಕರನ್ನು ಸಾಮಾಜಿಕ ಜವಾಬ್ದಾರರನ್ನಾಗಿ ಮಾಡಬೇಕಾದುದು ಶಿಕ್ಷಣದ ಗುರಿಯಾಗಿರಬೇಕು ಎಂದು ಹಲಸೂರು ರಾಮಕೃಷ್ಣ ಮಠದ ಪರಮ ಸುಖಾನಂದ ಸ್ವಾಮೀಜಿ ಪ್ರತಿಪಾದಿಸಿದರು.
ಶೇಷಾದ್ರಿಪುರ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ `ಯುವಜಾಗೃತಿ~ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶೇಷಾದ್ರಿಪುರ ಶಿಕ್ಷಣ ಸಂಸ್ಥೆಯ ಗೌರವ ಪ್ರಧಾನಕಾರ್ಯದರ್ಶಿ ವೂಡೆ.ಪಿ. ಕೃಷ್ಣ ಮಾತನಾಡಿ, ಶಿಕ್ಷಣದ ಬೇರುಗಳು ಕಹಿಯಾಗ್ದ್ದಿದರೂ ಅದರ ಫಲಗಳು ಎಂದಿಗೂ ಸಿಹಿಯಾಗಿರುತ್ತವೆ. ಯುವಕರು ವಿದ್ಯಾರ್ಥಿ ದಿಸೆಯಲ್ಲಿ ಸ್ವಾಮಿ ವಿವೇಕಾನಂದರ ಜೀವನ ಸಂದೇಶಗಳನ್ನು ಅಭ್ಯಸಿಸಿ, ತಮ್ಮದಾಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅಲಸೂರು ರಾಮಕೃಷ್ಣ ಮಠದ ಧರ್ಮ ವ್ರಜಾನಂದಜಿ ಸ್ವಾಮೀಜಿ, ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಬ್ರಹ್ಮಚಾರಿ ಕೃಷ್ಣಮಹಾರಾಜ್ ಸ್ವಾಮೀಜಿ, ವಿವೇಕಾನಂದರ ಕುರಿತ ಏಕಪಾತ್ರಾಭಿನಯ ಮಾಡುವುದರ ಮೂಲಕ ಅವರ ಸಂದೇಶಗಳನ್ನು ಬಿತ್ತರಿಸಿದರು. ಕಾರ್ಪೊರೇಟ್ ಕಂಪನಿಗಳ ತರಬೇತುದಾರ ರಮೇಶ್ ಉಮ್ರಾಣಿ, ಪ್ರಾಂಶುಪಾಲ ಡಾ.ಎಂ.ಪ್ರಕಾಶ್, ಉಪ ಪ್ರಾಂಶುಪಾಲ ಪ್ರೊ.ವೆಂಕಟೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.