ADVERTISEMENT

ರಸ್ತೆ ಮರು ನಿರ್ಮಾಣಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 30 ಮೇ 2018, 19:43 IST
Last Updated 30 ಮೇ 2018, 19:43 IST
ಕತ್ರಿಗುಪ್ಪೆಯ ವಾರ್ಡ್‌ ನಂ–163 ಶ್ರೀನಿವಾಸ ನಗರದ ಲಲಿತಾಂಬಾ ರಸ್ತೆಯನ್ನು ಬುಧವಾರ ಅಗೆದುಹಾಕಲಾಗಿದೆ  ಪ್ರಜಾವಾಣಿ ಚಿತ್ರ
ಕತ್ರಿಗುಪ್ಪೆಯ ವಾರ್ಡ್‌ ನಂ–163 ಶ್ರೀನಿವಾಸ ನಗರದ ಲಲಿತಾಂಬಾ ರಸ್ತೆಯನ್ನು ಬುಧವಾರ ಅಗೆದುಹಾಕಲಾಗಿದೆ ಪ್ರಜಾವಾಣಿ ಚಿತ್ರ   

ಬೆಂಗಳೂರು: ಶ್ರೀನಿವಾಸನಗರ ಬಡಾವಣೆಯನ್ನು ಸಂಪರ್ಕಿಸುವ ಕಾಂಕ್ರಿಟ್‌ ರಸ್ತೆಯೊಂದನ್ನು ಅಗೆದು ಮರು ನಿರ್ಮಾಣ ಮಾಡಲು ಬಿಬಿಎಂಪಿ ಮುಂದಾಗಿದ್ದು, ಬುಧವಾರ ಯಂತ್ರಗಳು ಅಗೆಯುವ ಕಾಮಗಾರಿ ನಡೆಸಿವೆ.

ಕತ್ರಿಗುಪ್ಪೆ 163ನೇ ವಾರ್ಡ್‌ನ 4ನೇ ಮುಖ್ಯರಸ್ತೆಯ 12ನೇ ಅಡ್ಡರಸ್ತೆ ಯನ್ನು (ಲಲಿತಾಂಬಾ ರಸ್ತೆ) ಅಗೆಯಲಾಗುತ್ತಿದೆ. ಕಳೆದ ವರ್ಷವಷ್ಟೇ ಈ ರಸ್ತೆ ನಿರ್ಮಿಸಲಾಗಿತ್ತು. ಇಲ್ಲಿನ ಮನೆಯೊಂದಕ್ಕೆ ನೀರು ಹರಿದುಹೋಗುತ್ತಿದೆ ಎಂಬ ನೆಪವೊಡ್ಡಿ ರಸ್ತೆ ಅಗೆಯಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ನಮ್ಮ ಮನೆ ತಲುಪಲು ಒಂದೂವರೆ ಕಿಲೊ ಮೀಟರ್‌ನಷ್ಟು ಸುತ್ತಿ ಬರಬೇಕಿದೆ. ವ್ಯಾಪಾರಿಗಳೂ ಸಂಕಟ ಎದುರಿಸುತ್ತಿದ್ದಾರೆ ಎಂದು ಇಲ್ಲಿನ ನಿವಾಸಿ ಸುಬ್ಬಣ್ಣ ಬೇಸರ ವ್ಯಕ್ತಪಡಿಸಿದರು.

ಬಿಬಿಎಂಪಿ ಸುಮಾರು ₹ 30 ಲಕ್ಷ ವೆಚ್ಚದಲ್ಲಿ ರಸ್ತೆ ಮರು ನಿರ್ಮಾಣಕ್ಕೆ ಮುಂದಾಗಿದೆ. ಇದರ ಬದಲು ನೀರು ಹರಿದುಹೋಗುವಂತೆ ಪರ್ಯಾಯ ವ್ಯವಸ್ಥೆ ನಿರ್ಮಿಸಬಹುದಿತ್ತು. ದುಂದುವೆಚ್ಚ ಮಾಡಲಾಗುತ್ತಿದೆ. ಈ ಮೊತ್ತವನ್ನು ನಗರದ ಮುಖ್ಯ ರಸ್ತೆಗಳ ಗುಂಡಿ ಮುಚ್ಚಲು ಬಳಸಬಹುದಿತ್ತು ಎಂದು ಅವರು ಬೇಸರ ವ್ಯಕ್ತಪಡಿಸಿದರು.

ADVERTISEMENT

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು, 163ನೇ ವಾರ್ಡ್‌ ಸದಸ್ಯ ಎಂ.ವೆಂಕಟೇಶ್‌ ಅವರಿಗೆ ದೂರವಾಣಿ ಕರೆ ಮಾಡಿದಾಗ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.