
ಪ್ರಜಾವಾಣಿ ವಾರ್ತೆಬೆಂಗಳೂರು: `ಒಂದು ರೂಪಾಯಿಗೆ ಒಂದು ಕೆ.ಜಿ ಅಕ್ಕಿ ಜತೆಗೆ ರಾಗಿ ಮತ್ತು ಜೋಳ ಕೂಡ ನೀಡಬೇಕು' ಎಂದು ಕರ್ನಾಟಕ ಮಕ್ಕಳ ಪಕ್ಷದ ಅಶೋಕ್ ಖೇಣಿ ವಿಧಾನಸಭೆಯಲ್ಲಿ ಸೋಮವಾರ ಸರ್ಕಾರವನ್ನು ಆಗ್ರಹಪಡಿಸಿದರು.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು `ಅಕ್ಕಿಯಲ್ಲಿ ಹೆಚ್ಚು ಪ್ರೊಟೀನ್ ಇಲ್ಲ. ಹೀಗಾಗಿ ಅದರ ಜತೆಗೆ ರಾಗಿ ಮತ್ತು ಜೋಳ ಕೂಡ ನೀಡಬೇಕು. ಜನರಿಗೆ ಯಾವುದು ಇಷ್ಟವೊ ಅದನ್ನು ಪಡೆಯಲು ಅವಕಾಶ ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂಬಂಧ ನಿಯಮಗಳನ್ನು ಇನ್ನೂ ರೂಪಿಸಿಲ್ಲ. ಅದು ಜಾರಿಗೆ ಬರುವುದು ವಿಳಂಬ ಆಗುವ ಸೂಚನೆ ಇದೆ. ಅಲ್ಲಿಯವರೆಗೂ ಪ್ರತಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ತಲಾ 10 ಕೋಟಿ ರೂಪಾಯಿ ಅನುದಾನ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.