
ಬೆಂಗಳೂರು: ಕೃಷಿ ಮೇಳಕ್ಕೆ ಬಂದಿದ್ದೀರಾ; ಹಾಗಾದರೆ ರಾಗಿ ಚಾಕ್‌ಲೇಟ್ ತಿಂದಿದ್ದೀರಾ?
ಕೃಷಿಮೇಳದಲ್ಲಿ ಭರದಿಂದ ಮಾರಾಟ ಆಗುತ್ತಿ ರುವ ತಿನಿಸು ಇದು. ನಗರದ ಲಗ್ಗೆರೆಯ ಶ್ರೀ ಆಗ್ರೋ ಫುಡ್ಸ್ ಸಂಸ್ಥೆ ಈ ಚಾಕ್‌ಲೇಟ್ ಅಭಿವೃದ್ಧಿ ಪಡಿಸಿದ್ದು, ಭಾರೀ ಬೇಡಿಕೆ ಗಿಟ್ಟಿಸಿದೆ. ಈ ಚಾಕ್ ಲೇಟ್‌ಗಳನ್ನು ₨ 5ಕ್ಕೆ ಒಂದರಂತೆ ಮಾರಾಟಕ್ಕೆ ಇಡ ಲಾಗಿದೆ.
ಮಾಮೂಲಿ ಚಾಕ್‌ಲೇಟ್‌ಗಳಿಗೆ ಬಳ ಸುವ ಪದಾರ್ಥವನ್ನೇ ಇದಕ್ಕೂ ಬಳಸಲಾಗಿದ್ದು, ರಾಗಿಯ ಪ್ರಮಾಣವೇ ಹೆಚ್ಚಿದೆ ಎನ್ನುತ್ತಾರೆ ಶ್ರೀ ಆಗ್ರೋ ಫುಡ್ಸ್‌ನ ಬಿ.ಜಿ.ಲತಾ.
ಹಿರಿಯರು, ಕಿರಿಯರು ಎನ್ನದಂತೆ ಮೇಳಕ್ಕೆ ಬಂದ ಬಹುತೇಕರು ಈ ಚಾಕ್‌ಲೇಟ್‌ಗಳನ್ನು ಚಪ್ಪ ರಿಸುತ್ತಿದ್ದರು. ಬೇಡಿಕೆ ಇದ್ದಾಗ ಮಾತ್ರ ತಯಾರಿಸಿ ಕೊಡುತ್ತೇವೆ. ಜನ್ಮದಿನಕ್ಕೆ ಈ ಚಾಕ್‌ಲೇಟ್‌ಗಳಿ ಗಾಗಿ ಭಾರೀ ಬೇಡಿಕೆ ಬರುತ್ತಿದೆ ಎಂದು ಅವರು ಹೇಳುತ್ತಾರೆ. ಮೇಳದ ಮೊದಲ ಎರಡು ದಿನಗ ಳಲ್ಲಿ ನೂರು ಕೆಜಿಗೂ ಅಧಿಕ ಮಾರಾಟವಾದ ಅಂದಾಜಿದೆ ಎಂದು ಅವರು ವಿವರಿಸುತ್ತಾರೆ.
ಬಂದಿದೆ ಹೈಡ್ರಾಲಿಕ್ ಅಟ್ಟಣಿಗೆ: ಕೃಷಿ ಮೇಳದ ತಾಂತ್ರಿಕ ಉಪಕರಣಗಳ ಪ್ರದರ್ಶನದಲ್ಲಿ ಅತ್ಯಂತ ಎತ್ತರದಲ್ಲಿದ್ದ ಹೈಡ್ರಾಲಿಕ್ ಅಟ್ಟಣಿಗೆ ಶುಕ್ರವಾರ ರೈತರನ್ನು ಸೆಳೆಯುತ್ತಿತ್ತು.
ತೆಂಗು, ಅಡಿಕೆ, ಮಾವು, ಹುಣಸೆ ಸೇರಿದಂತೆ ಎತ್ತರದ ಮರಗಳಲ್ಲಿ ಬಿಡುವ ಫಸಲು ತೆಗೆಯಲು ಮತ್ತು ಫಸಲಿಗೆ ಕೀಟಬಾಧೆ ಉಂಟಾದರೆ ಕ್ರಿಮಿ ನಾಶಕ ಸಿಂಪಡಿಸಲು ಈ ಅಟ್ಟಣಿಗೆ ಉಪಯುಕ್ತ ವಾಗಿದೆ. ಸುಮಾರು 480 ಕೆಜಿ ಭಾರದ ಈ ಅಟ್ಟ ಣಿಗೆಗೆ ₨ 98,000 ಬೆಲೆ ನಿಗದಿ ಮಾಡಲಾಗಿದೆ. ಟ್ರ್ಯಾಕ್ಟರ್‌ನ ಟ್ರೇಲರ್‌ನಲ್ಲಿ ಆ ಅಟ್ಟಿಣಿಗೆಯನ್ನು ಜೋಡಿಸಲಾಗುತ್ತದೆ. ಚಿತ್ರದುರ್ಗದ ವರ್ಷಾ ಅಸೋಸಿಯೇಟ್ಸ್ ಸಂಸ್ಥೆ ಈ ಅಟ್ಟಣಿಗೆಯನ್ನು ಸಿದ್ಧಪಡಿಸಿದೆ. 20 ಅಡಿ ಎತ್ತರದವರೆಗೆ ಅದು ಚಲಿಸುತ್ತದೆ.
ಹರಿದುಬಂದ ಜನಸಾಗರ: ಕೃಷಿಮೇಳದ ಎರಡನೇ ದಿನವಾದ ಶುಕ್ರವಾರ ಜಿಕೆವಿಕೆ ಆವರಣಕ್ಕೆ ಭಾರೀ ಪ್ರಮಾಣದ ಜನಸಾಗರ ಹರಿದುಬಂತು.
ವಸ್ತು ಪ್ರದರ್ಶನದ ಸುತ್ತಲಿನ ಜಾಗದಲ್ಲಿ ಎತ್ತ ನೋಡಿದರೂ ಜನರೇ ತುಂಬಿ ಹೋಗಿದ್ದರು. ರೈತರಷ್ಟೇ ನಗರದ ಜನರೂ ಮೇಳದಲ್ಲಿ ಕಂಡಿದ್ದು ವಿಶೇಷವಾಗಿತ್ತು. ಹಲವು ಶಾಲೆಗಳು ಕೃಷಿ ಜಾತ್ರೆಯನ್ನು ವೀಕ್ಷಿಸಿಲು ವಿದ್ಯಾರ್ಥಿಗಳನ್ನು ಕರೆತಂದಿದ್ದವು.
ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ತುಮಕೂರು, ಹಾಸನ, ರಾಮನಗರ ಮತ್ತು ಮಂಡ್ಯ ಜಿಲ್ಲೆಗಳಿಂದ ಬಸ್ಸುಗಳಲ್ಲಿ ರೈತರನ್ನು ಕರೆ ತರಲಾಗಿತ್ತು. ಸಂಜೆವರೆಗೂ ಮೇಳದಲ್ಲಿ ಜನ ಜಂಗುಳಿ ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.