ADVERTISEMENT

ರಾಘವೇಂದ್ರಸ್ವಾಮಿಗಳ ಆರಾಧನಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2012, 19:30 IST
Last Updated 6 ಆಗಸ್ಟ್ 2012, 19:30 IST

ಬೆಂಗಳೂರು: ಬನ್ನೇರುಘಟ್ಟ ಬಳಿಯ ನಿಸರ್ಗ ಲೇಔಟ್‌ನ ಆಂಜನೇಯ ಹಾಗೂ ರಾಘವೇಂದ್ರಸ್ವಾಮಿಗಳ ದೇವಾಲಯದಲ್ಲಿ ನಿರ್ಮಾಣ್ ದೇವಾಲಯಗಳ ವಿಶ್ವಸ್ಥ ಮಂಡಳಿ ವತಿಯಿಂದ ಇತ್ತೀಚೆಗೆ ರಾಘವೇಂದ್ರಸ್ವಾಮಿಗಳ 341ನೇ ಆರಾಧನಾ ಮಹೋತ್ಸವ ನಡೆಯಿತು.

ಬಡಾವಣೆಯ ಪುರಂದರ ಮಂಟಪ ಹಾಗೂ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಭಜನೆ ಏರ್ಪಡಿಸಲಾಗಿತ್ತು. ಆರಾಧನೆಯ ಅಂಗವಾಗಿ `ಅಷ್ಟಾಕ್ಷರ ಮಂತ್ರ ಹೋಮ~ ಹಾಗೂ ರಾಘವೇಂದ್ರಸ್ವಾಮಿಗಳ ಬೃಂದಾವನಕ್ಕೆ ವಿಶೇಷ ಅಲಂಕಾರ ಹಾಗೂ ವಿಶೇಷ ಪೂಜೆ ನಡೆಸಲಾಯಿತು.

3 ದಿನಗಳ ಕಾಲ ನಡೆದ ಆರಾಧನೆಯಲ್ಲಿ ವಾಣಿ ಸತೀಶ್, ಎಂ.ಎ.ವೀಣಾ ಮತ್ತು ನಾಗರಾಜ ಹವಾಲ್ದಾರ್ ಅವರಿಂದ ಭಕ್ತಿಗೀತೆಗಳ ಗಾಯನ ನಡೆಯಿತು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.