ADVERTISEMENT

ರಾಜ್ಯದಲ್ಲಿ 24,452 ಭಿಕ್ಷುಕರು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2014, 19:50 IST
Last Updated 23 ಮಾರ್ಚ್ 2014, 19:50 IST

ಬೆಂಗಳೂರು: ರಾಜ್ಯದಲ್ಲಿ 24, 452 ಮಂದಿ ಭಿಕ್ಷುಕರಿದ್ದು, ಬೆಂಗಳೂರು ಗ್ರಾಮಾಂತರ ಒಂದರಲ್ಲಿಯೇ  7, 745 ಭಿಕ್ಷುಕರನ್ನು ಗುರುತಿಸಲಾಗಿದೆ ಎಂದು ಸರ್ಕಾರದ ನಡೆಸಿದ ಸಮೀಕ್ಷಾ ವರದಿ ತಿಳಿಸಿದೆ.

ಒಂದು ವಾರದ ಹಿಂದಷ್ಟೆ  ಸರ್ಕಾರ ಬಿಡುಗಡೆ ಮಾಡಿದ ‘ರಾಜ್ಯದಲ್ಲಿ ಭಿಕ್ಷುಕರು’ ಕುರಿತ ವರದಿಯಲ್ಲಿ ಹೇಳಿದೆ.
ಗುಲ್ಬರ್ಗದಲ್ಲಿ (1,302), ಚಿತ್ರದುರ್ಗ (847), ಯಾದಗಿರಿ (26), ಕೊಡಗು (36) ಹೀಗೆ ನಾನಾ ಭಾಗಗಳಲ್ಲಿ ಭಿಕ್ಷುಕರನ್ನು ಗುರುತಿಸಲಾಗಿದೆ.

ಭಿಕ್ಷುಕರ ಸಮುದಾಯದಲ್ಲಿ ಶೇ 56.9 ರಷ್ಟು  ಗಂಡಸರು, ಶೇ 42.2 ಮಹಿಳೆಯರು ಹಾಗೂ 0.9 ಲೈಂಗಿಕ ಅಲ್ಪಸಂಖ್ಯಾತರಿದ್ದಾರೆ ಎಂದು  ಸಮೀಕ್ಷೆ ತಿಳಿಸಿದೆ.

ಅಲ್ಲದೇ ಸುಮಾರು 13,677 ಮಂದಿ  ದೈಹಿಕ ಹಾಗೂ  ಮಾನಸಿಕ ಕಾಯಿಲೆಯಿಂದ ಬಳುತ್ತಿದ್ದಾರೆ. ಶೇ 20ರಷ್ಟು ಮಂದಿಗೆ ಅಂಗವೈಕಲ್ಯವಿದೆ.     ರಾಜ್ಯದ ನಾನಾ ಭಾಗಗಳಲ್ಲಿರುವ ದೇವಸ್ಥಾನ, ಮಸೀದಿ, ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣ, ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಸಮೀಕ್ಷೆ ನಡೆಸಲಾಗಿದೆ.

2010ರಲ್ಲಿ ಭಿಕ್ಷುಕರ ಕಾಲೋನಿಯಲ್ಲಿ ಸಾಂಕ್ರಾಮಿಕ ರೋಗಗಳು ಹರಡಿದ್ದ ಹಿನ್ನೆಲೆಯಲ್ಲಿ ಸರ್ಕಾರದ ಕ್ರಮದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

ಸಾಮಾಜಿಕ ಪಿಡುಗಾಗಿರುವ ಭಿಕ್ಷಾಟನೆಯನ್ನು ನಿರ್ಮೂ ಲನೆಗೊಳಿಸುವ ಮೊದಲ ಹಂತದ ಪ್ರಯತ್ನವಾಗಿ ಸರ್ಕಾರ ಈ ಸಮೀಕ್ಷೆ ಕೈಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.