ADVERTISEMENT

ರಾತ್ರಿ 1ರ ತನಕ ಹೋಟೆಲ್, ಬಾರ್‌

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2014, 19:30 IST
Last Updated 1 ಮಾರ್ಚ್ 2014, 19:30 IST

ಬೆಂಗಳೂರು: ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ಹಾಗೂ ಇತರ ಸಂಘ ಸಂಸ್ಥೆಗಳ ಒತ್ತಡಕ್ಕೆ ಮಣಿದಿರುವ ರಾಜ್ಯ ಸರ್ಕಾರ ಬೆಂಗಳೂರು ನಗರದಲ್ಲಿ ಮಧ್ಯರಾತ್ರಿ 1 ಗಂಟೆ­ವರೆಗೆ ಹೋಟೆಲ್‌, ಬಾರ್‌ ಮತ್ತು ರೆಸ್ಟೋರೆಂಟ್‌ ತೆರೆದಿ­ಡಲು  ಅನುಮತಿ ನೀಡಿದೆ.

ತಿಂಡಿ– ತಿನಿಸು ಸರಬರಾಜು ಮಾಡುವ ಹೋಟೆಲ್‌ಗಳು ವಾರದ ಎಲ್ಲ ದಿನ ತೆರೆಯಬಹುದು. ಆದರೆ ಬಾರ್‌, ರೆಸ್ಟೋರೆಂಟ್‌ ಮತ್ತು ಪಬ್‌ಗಳಿಗೆ ಶುಕ್ರವಾರ, ಶನಿವಾರ ಮಾತ್ರ ರಾತ್ರಿ 1 ಗಂಟೆವರೆಗೆ ತೆರೆಯಲು ಅನುಮತಿ ನೀಡಲಾಗಿದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್‌ ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಈ ವ್ಯವಸ್ಥೆ ಜಾರಿಗೆ ಅಬಕಾರಿ ಇಲಾಖೆ ಒಪ್ಪಿಗೆ ಸೂಚಿಸಿದ್ದು, ನಗರ ಪೊಲೀಸರು ಇನ್ನಷ್ಟೇ ಅಧಿಕೃತ ಆದೇಶ ಹೊರಡಿಸಬೇಕಾಗಿದೆ. ಇದೇ 8ರಿಂದ ಜಾರಿಗೆ ಬರುವ ನಿರೀಕ್ಷೆ ಇದೆ.

‘ಪ್ರಾಯೋಗಿಕವಾಗಿ ಮೂರು ತಿಂಗಳ ಕಾಲ ಈ ವ್ಯವಸ್ಥೆ ಜಾರಿಯಲ್ಲಿರುತ್ತದೆ. ಜನರಿಂದ ಬರುವ ಪ್ರತಿಕ್ರಿಯೆ, ಇದರ ಸಾಧಕ – ಬಾಧಕಗಳನ್ನು ನೋಡಿಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದರು.

ದೇಶದ ಇತರ ಮಹಾನಗರಗಳಲ್ಲಿ ಮಧ್ಯರಾತ್ರಿವರೆಗೂ ಹೋಟೆಲ್‌ಗಳು, ಬಾರ್‌, ರೆಸ್ಟೋರೆಂಟ್‌ಗಳು ತೆರೆದಿರು­ತ್ತವೆ. ಬೆಂಗಳೂರು ನಗರದಲ್ಲಿಯೂ ಅಂತಹ ಅವಕಾಶ ಕಲ್ಪಿಸಬೇಕು ಎಂದು ಸಂಘ ಸಂಸ್ಥೆಗಳು, ಮಾಹಿತಿ ತಂತ್ರ­ಜ್ಞಾನ ಕಂಪೆನಿಗಳು ಸರ್ಕಾರವನ್ನು ಒತ್ತಾಯಿಸಿದ್ದವು.

ಬೆಂಗಳೂರು ನಗರದ ಯಶಸ್ಸು ನೋಡಿಕೊಂಡು ಇತರ ಪ್ರಮುಖ ನಗರಗಳಲ್ಲೂ ಬಾರ್‌, ಪಬ್‌, ಹೋಟೆಲ್‌ ಅವಧಿ ವಿಸ್ತರಣೆ ಬಗ್ಗೆ
ತೀರ್ಮಾನಿಸ­ಲಾಗುವುದು
–ಕೆ.ಜೆ. ಜಾರ್ಜ್‌, ಗೃಹ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT