ADVERTISEMENT

ರಾಷ್ಟ್ರೀಯ ಟಿಬೆಟನ್‌ ಬಂಡಾಯ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2014, 20:28 IST
Last Updated 10 ಮಾರ್ಚ್ 2014, 20:28 IST

ಬೆಂಗಳೂರು:  ಟಿಬೆಟನ್‌ ಯೂತ್‌ ಕಾಂಗ್ರೆಸ್ ವತಿಯಿಂದ ನಗರದ ಬನಪ್ಪ ಉದ್ಯಾನದಲ್ಲಿ ಸೋಮವಾರ 55ನೇ ರಾಷ್ಟ್ರೀಯ ಟಿಬೆಟನ್‌ ಬಂಡಾಯ ದಿನಾಚರಣೆಯನ್ನು ಆಚರಿಸಲಾಯಿತು.

ಈ ಕುರಿತು  ಮಾತನಾಡಿದ ಯೂತ್‌ ಕಾಂಗ್ರೆಸ್ ಸಂಘಟನೆಯ ಸಂಚಾಲಕಿ ತೀನ್ಲೆ ಚುಕ್ಕಿ, ‘ಚೀನಿಯರ ದಬ್ಬಾಳಿಕೆ, ಚಿತ್ರಹಿಂಸೆ, ಸೆರೆಮನೆವಾಸ ಹಾಗೂ ಮರಣ ದಂಡನೆಯಂತಹ ಹೇಯ ಕೃತ್ಯದಿಂದಾಗಿ 1.2 ಮಿಲಿಯನ್‌­ಗಿಂತಲೂ ಹೆಚ್ಚು ಟಿಬೆಟನ್‌ರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.

ಇಲ್ಲಿ­ಯ­ವರೆಗೆ ಸುಮಾರು 7 ಸಾವಿರಕ್ಕೂ ಹೆಚ್ಚು ಟಿಬೆಟನ್‌ ಧರ್ಮ­ಕೇಂದ್ರಗಳು ನಾಶ­ಗೊಂಡಿವೆ. ಇದಲ್ಲದೇ ಚೀನಿಯರ ಅತಿಯಾದ ಗಣಿಗಾರಿಕೆ, ಅರಣ್ಯನಾಶ, ಸೇನಾನೆಲೆ ಹಾಗೂ ರಸ್ತೆ ನಿರ್ಮಾಣ­ದಂತಹ ಕೃತ್ಯಗಳಿಂದಾಗಿ ಅಲ್ಲಿನ ಶ್ರೀಮಂತ ಪರಿಸರ ನಾಶವಾಗಿದೆ’ ಎಂದರು.

‘ಚೀನಾ- ಟಿಬೆಟ್ ನಡುವಿನ ಈ ಸಂಘ­ರ್ಷ­ಮಯ ವಾತಾವರಣ ತಿಳಿಗೊಳ್ಳ­ಬೇಕು. ಟಿಬೆಟನ್ನರು  ಚೀನಾದ ಧೋರ­ಣೆಯನ್ನು ಖಂಡಿ­ಸುತ್ತೇವೆ. ನ್ಯಾಯದ ಪರ ನಿಂತಿ­ರುವ ವಿಶ್ವದ ಶಾಂತಿ­­ಪ್ರಿಯ ದೇಶಗಳು, ಸಂಘಟನೆಗಳು ಚೀನಾ ಆಡಳಿತದ ಮೇಲೆ ಒತ್ತಡ ಹೇರಬೇಕು.
ಟಿಬೆಟನ್‌ರ ಮೂಲ ಮಾನವ ಹಕ್ಕು­ಗಳನ್ನು ಗೌರವಿ­ಸಬೇಕು, ಎಲ್ಲಾ ಟಿಬೆ­ಟನ್‌ ರಾಜಕೀಯ ಕೈದಿಗಳನ್ನು ಬಿಡು­ಗಡೆ ಮಾಡಬೇಕು ಹಾಗೂ ಟಿಬೆಟನ್‌­ಗಳ ಸಮಸ್ಯೆ ಬಗೆ­ಹರಿ­ಸಲು ಧರ್ಮ­ಗುರು ದಲೈಲಾಮಾ ಅವರ ಪ್ರಸ್ತಾವನೆ­ಯನ್ನು ಚೀನಾ ಆಡ­ಳಿತ ಸ್ವೀಕರಿಸಬೇಕು’ ಎಂದು ಯೂತ್‌ ಕಾಂಗ್ರೆಸ್ ಸಂಘಟನೆ ಸಂಚಾಲಕಿ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.