ADVERTISEMENT

ಲಂಚಕ್ಕೆ ಒತ್ತಾಯ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 19:55 IST
Last Updated 5 ಡಿಸೆಂಬರ್ 2012, 19:55 IST

ಬೆಂಗಳೂರು: ಲಂಚ ನೀಡಲು ಒತ್ತಾಯಿಸಿದ ಆರೋಪದ ಮೇಲೆ ಸಹಾಯಕ ಔಷಧ ನಿಯಂತ್ರಣಾಧಿಕಾರಿ ಸಿ.ಕುಮಾರ್, ಔಷಧ ನಿರೀಕ್ಷಕಿ ವಿಶಾಲಾಕ್ಷಿ ಹಾಗೂ ಸತ್ಯ ಎಂಬುವವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.ದೂರುದಾರ ಡಾ.ಪಿ.ಕೆ.ಗೋಪಿನಾಥ್ ಎಂಬುವವರು ವೃತ್ತಿಯಿಂದ ವೈದ್ಯರು. ಅವರು ಔಷಧ ಅಂಗಡಿಯನ್ನೂ ನಡೆಸುತ್ತಿದ್ದಾರೆ.

ಅವರಿಗೆ ನೀಡಲಾಗಿದ್ದ ನೋಟೀಸ್ ಅನ್ನು ವಾಪಸ್ ಪಡೆಯಲು ಕುಮಾರ್ ಮತ್ತು ವಿಶಾಲಾಕ್ಷಿ ಅವರು 20 ಸಾವಿರ ರೂಪಾಯಿ ಲಂಚ ನೀಡುವಂತೆ ಒತ್ತಾಯಿಸಿದ್ದರು. ಲಂಚ ನೀಡಲು ಒಪ್ಪದ ಗೋಪಿನಾಥ್, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಗಳನ್ನು ಬಂಧಿಸಲು ಬಲೆ ಬೀಸಿದ ಲೋಕಾಯುಕ್ತ ಪೊಲೀಸರು, ಬುಧವಾರ ನಡೆಸಿದ ಕಾರ್ಯಾಚರಣೆಯಲ್ಲಿ ಸತ್ಯ ಎಂಬುವವರೂ ಸಿಕ್ಕಿಬಿದ್ದಿದ್ದಾರೆ. ಕುಮಾರ್ ಅವರು ಲಂಚದ ಹಣವನ್ನು ಸತ್ಯ ಅವರ ಮೂಲಕ ಪಡೆದುಕೊಳ್ಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಸತ್ಯ ಅವರನ್ನು ಪೊಲೀಸರು ಬಂಧಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.