ADVERTISEMENT

ಲಗ್ಗೆರೆ ವಾರ್ಡ್‌ನಲ್ಲಿ ನೀರಿನ ಕೊರತೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2012, 19:30 IST
Last Updated 12 ಏಪ್ರಿಲ್ 2012, 19:30 IST

ಪೀಣ್ಯ ದಾಸರಹಳ್ಳಿ: ಲಗ್ಗೆರೆ ವಾರ್ಡ್ ವ್ಯಾಪ್ತಿಯಲ್ಲಿ ನೀರಿನ ಕೊರತೆ ತೀವ್ರವಾಗಿದೆ. ವಿವಿಧ ಬಡಾವಣೆಗಳ ನಿವಾಸಿಗಳು ಕೆಲಸ ಕಾರ್ಯಗಳನ್ನು ಬದಿಗೊತ್ತಿ ಟ್ಯಾಂಕರ್ ನೀರಿಗಾಗಿ ಕಾಯುವ ಪರಿಸ್ಥಿತಿ ಉಂಟಾಗಿದೆ.

ವಾರ್ಡ್‌ನಲ್ಲಿ 80 ಕೊಳವೆ ಬಾವಿಗಳಿವೆ. ಆದರೆ ನೀರು ಇರುವುದು 10ರಿಂದ 15 ಕೊಳವೆ ಬಾವಿಗಳಲ್ಲಿ ಮಾತ್ರ ನೀರು ಇದೆ. ಉಳಿದೆಡೆ 4 ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

ಯಾವ ಸಮಯಕ್ಕೆ ಟ್ಯಾಂಕರ್ ಬರುತ್ತದೆ ಎಂಬುದು ಗೊತ್ತಿಲ್ಲದೇ ಜನರು ಪರದಾಡುವ ಸ್ಥಿತಿ ಉಂಟಾಗಿದೆ. ಟ್ಯಾಂಕರ್ ಬಂದ ತಕ್ಷಣ ನೀರಿಗಾಗಿ ನೂರಾರು ಜನರು ಮುಗಿ ಬೀಳುವ ದೃಶ್ಯ ಸಾಮಾನ್ಯವಾಗಿದೆ.
ಕೆಲಸ ಕಾರ್ಯಗಳಿಗೆ ಹೊರಗೆ ಹೋಗುವ ನೌಕರರು, ಕಾರ್ಮಿಕರು ಖಾಸಗಿಯವರಿಂದ ಹಣ ಕೊಟ್ಟು ನೀರು ಖರೀದಿಸಬೇಕಾದ ಅನಿವಾರ್ಯತೆ ಇದೆ.

ಪಾಲಿಕೆ ಸದಸ್ಯ ಲಕ್ಷ್ಮೀಕಾಂತ್ ರೆಡ್ಡಿ, `ಕಂದಾಯ ಬಡಾವಣೆಗಳು ಹೆಚ್ಚಿರುವುದರಿಂದ ವಾರ್ಡ್‌ನಲ್ಲಿ ಮೂಲ ಸೌಕರ್ಯಗಳ ಕೊರತೆ ಹೆಚ್ಚಾಗಿದೆ. ನೀರಿನ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುವೆ~ ಎಂದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.