ADVERTISEMENT

ಲಿಂಬಾವಳಿ ಮೇಲೆ ಹಲ್ಲೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 5 ಜುಲೈ 2017, 19:30 IST
Last Updated 5 ಜುಲೈ 2017, 19:30 IST
ಕೋಲಿ ಸಮಾಜದ ಮುಖಂಡರು ಅರವಿಂದ ಲಿಂಬಾವಳಿ ಅವರ ಮೇಲೆ ಹಲ್ಲೆ ನಡೆಸಲು ಯತ್ನಿಸಿದಾಗ ಅಂಗರಕ್ಷಕ ತಡೆದ ದೃಶ್ಯ  –ಪ್ರಜಾವಾಣಿ ಚಿತ್ರ
ಕೋಲಿ ಸಮಾಜದ ಮುಖಂಡರು ಅರವಿಂದ ಲಿಂಬಾವಳಿ ಅವರ ಮೇಲೆ ಹಲ್ಲೆ ನಡೆಸಲು ಯತ್ನಿಸಿದಾಗ ಅಂಗರಕ್ಷಕ ತಡೆದ ದೃಶ್ಯ –ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಮನಾಥ್ ಕೋವಿಂದ್ ಅವರನ್ನು ಅಭಿನಂದಿಸಲು ತಮಗೆ ಅವಕಾಶ ನೀಡಲಿಲ್ಲ ಎಂದು ಆರೋಪಿಸಿ ಕೋಲಿ ಸಮಾಜದ ಕೆಲವರು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಮೇಲೆ ಹಲ್ಲೆ ನಡೆಸಲು ಮುಂದಾದ ಘಟನೆ ನಡೆಯಿತು.

ಲಿಂಬಾವಳಿ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದರು. ಸಭೆ ಮುಗಿಸಿಕೊಂಡು ಕೋವಿಂದ್ ಅವರು ತೆರಳಿದ ಬಳಿಕ ಲಿಂಬಾವಳಿ ಅವರನ್ನು ತಡೆದ ಕೆಲವರು ಅಂಗಿ ಹಿಡಿದು ಎಳೆದಾಡಿದರು.

‘ಕೋವಿಂದ್ ಅವರನ್ನು ಭೇಟಿ ಮಾಡದಂತೆ ನಮ್ಮನ್ನು ಉದ್ದೇಶಪೂರ್ವಕವಾಗಿ  ಅವಕಾಶ ನೀಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ಘೇರಾವ್‌ ಮಾಡಿ ತಳ್ಳಾಡಿದರು.  ಪೊಲೀಸರು ಮತ್ತು ಅಂಗರಕ್ಷಕರ ಸಹಾಯದಿಂದ ಬಿಡಿಸಿಕೊಂಡು ಲಿಂಬಾವಳಿ ಕಾರು ಹತ್ತಿ ಹೊರಟರು.

ADVERTISEMENT

ಚಿತ್ರದುರ್ಗ ಕ್ಷೇತ್ರದಿಂದ ಟಿಕೆಟ್‌ ಕೊಡಿಸುವುದಾಗಿ ನಂಬಿಸಿ ಬೋವಿ ಸಮಾಜದ ಮುಖಂಡ ನಿವೃತ್ತ ಡಿಸಿಪಿ ತಿಮ್ಮಪ್ಪ ಅವರಿಂದ  ಲಿಂಬಾವಳಿ ₹ 2 ಕೋಟಿ ಪಡೆದಿದ್ದಾರೆ ಎಂದು ವೆಂಕಟೇಶ ಮೌರ್ಯ ಆರೋಪ ಮಾಡಿದ್ದರು.

ಅನಂತರ ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಮೌರ್ಯ ಅವರನ್ನು ಅಮಾನತು ಮಾಡಲಾಗಿತ್ತು. ಮೌರ್ಯ ಬೆಂಬಲಿಗರೇ ಹಲ್ಲೆಗೆ ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಅದನ್ನು ಮೌರ್ಯ ಬೆಂಬಲಿಗರು ತಳ್ಳಿಹಾಕಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.