ಬೆಂಗಳೂರು: ಅಂತರಶಾಲಾ ವರ್ಬ್ಯಾಟಲ್ ಚರ್ಚಾ ಸ್ಪರ್ಧೆಯ ಆರಂಭಿಕ ಪಂದ್ಯದ ಸೆಮಿಫೈನಲ್ ಸುತ್ತು ನಗರದ ಬಾಲಭವನದಲ್ಲಿ ಗುರುವಾರ ನಡೆದಿದ್ದು, ಅಂತಿಮ ಸುತ್ತಿಗೆ ನಗರದ ವಿದ್ಯಾಶಿಲ್ಪ ಅಕಾಡೆಮಿ, ನೂಟ್ರೆ ಡಾಮೆ ಅಕಾಡೆಮಿ ಮತ್ತು ಕೇಂದ್ರೀಯ ವಿದ್ಯಾ ಶಾಲೆಯ ವಿದ್ಯಾರ್ಥಿಗಳು ಆಯ್ಕೆಯಾದರು.
ಈಚೆಗೆ ಆರಂಭಗೊಂಡ ಆರಂಭಿಕ ಪಂದ್ಯದ ಸುತ್ತಿನಲ್ಲಿ 8 ರಿಂದ 12 ವಯೋಮಿತಿಯಲ್ಲಿರುವ ಮಕ್ಕಳು ಭಾಗವಹಿಸಿದ್ದರು, ಸೆಮಿಫೈನಲ್ ಸುತ್ತಿನಲ್ಲಿ ಕೇಂದ್ರೀಯ ವಿದ್ಯಾಲಯ, ಬಿಷಪ್ ಕಾಟನ್‌ಶಾಲೆ, ವಿದ್ಯಾಶಿಲ್ಪ ಅಕಾಡೆಮಿ, ನೂಟ್ರೆ ಡಾಮೆ ಅಕಾಡೆಮಿ, ಡೆಲ್ಲಿ ಪಬ್ಲಿಕ್ ಶಾಲೆಗಳು ಸೇರಿದಂತೆ ಒಟ್ಟು ಐದು ಶಾಲೆಗಳ 21 ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಂಗಕರ್ಮಿ ಸುಮನ್ ಪೊನ್ನಮ್ಮ ಮತ್ತು ಪರಿಸರವಾದಿ ಪ್ರಭಾಕರ್‌ರಾವ್ ಅವರು ತೀರ್ಪುಗಾರರಾಗಿ ಭಾಗವಹಿಸಿದ್ದರು.
ವರ್ಬ್ಯಾಟಲ್ ಸಂಸ್ಥೆಯ ದೀಪಕ್ ತಿಮ್ಮಯ, ` ಜ್ಞಾನ ಅಭಿವೃದ್ಧಿಪಡಿಸಿಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದ್ದು, ಚಿಣ್ಣರ ಕನಸುಗಳಿಗೆ ಹೆಚ್ಚಿನ ಇಂಬು ನೀಡಲು ವರ್ಬ್ಯಾಟಲ್ ಚಟುವಟಿಕೆ ಸಹಕಾರಿಯಾಗಲಿದೆ~ ಎಂದು ತಿಳಿಸಿದರು.
ವರ್ಬ್ಯಾಟಲ್ ಕಿರಿಯ ಮತ್ತು ಹಿರಿಯ ವಿಭಾಗದ ಸ್ಪರ್ಧೆಗಳು ಆಗಸ್ಟ್ 11 ಮತ್ತು 12ರಂದು ಮಂಗಳೂರಿನಲ್ಲಿ ನಡೆಯಲಿದೆ. ಈ ಎಲ್ಲ ಸುತ್ತುಗಳ ನಂತರ ಆಗಸ್ಟ್ 31 ರಂದು ನಗರದಲ್ಲಿ ಅಂತಿಮ ಸುತ್ತು ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.