
ಪ್ರಜಾವಾಣಿ ವಾರ್ತೆಬೆಂಗಳೂರು: `ವಾಯುಪಡೆಯ ವಿಮಾನ ಮತ್ತು ಅದರ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಅವುಗಳ ನಿರ್ವಹಣೆಯಲ್ಲಿ ಎಂಜಿನಿಯರ್‌ಗಳ ಪಾತ್ರ ದೊಡ್ಡದು' ಎಂದು ಏರ್ ಮಾರ್ಷಲ್ ಅರುಪ್ ರಹಾ ಹೇಳಿದರು.
ಜಾಲಹಳ್ಳಿಯ ವಾಯುಪಡೆ ತಾಂತ್ರಿಕ ಕಾಲೇಜಿನಲ್ಲಿ ಈಚೆಗೆ ನಡೆದ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
`ಮುಂದೆ ಗುರಿಯನ್ನಿಟ್ಟುಕೊಂಡು ಪ್ರಯತ್ನವನ್ನು ಮಾಡಿದರೆ ಯಶಸ್ಸು ದೊರೆಯುತ್ತದೆ. ಮುಖ್ಯವಾಗಿ ಪರಿಶ್ರಮ ಪಡಬೇಕು. ಯಾವುದೇ ಸವಾಲಿಗೂ ಸಿದ್ಧರಾಗಿರಬೇಕು' ಎಂದು ಹೇಳಿದರು.
ಒಟ್ಟು 118 ಅಧಿಕಾರಿಗಳು ತರಬೇತಿ ಪಡೆದು ನಿರ್ಗಮನ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು. ಅದರಲ್ಲಿ 28 ಮಹಿಳಾ ಅಧಿಕಾರಿಗಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.