ADVERTISEMENT

ವಾಹನ ಸಂಚಾರ ದುಸ್ತರ

ಮಳೆ ಸುರಿದ ಹಿನ್ನೆಲೆಯಲ್ಲಿ ಹದಗೆಟ್ಟ ರಸ್ತೆ

​ಪ್ರಜಾವಾಣಿ ವಾರ್ತೆ
Published 12 ಮೇ 2014, 20:10 IST
Last Updated 12 ಮೇ 2014, 20:10 IST
ಮಹದೇವಪುರ ಆಸುಪಾಸಿನಲ್ಲಿ ಈಚೆಗೆ ಸುರಿದ ಭಾರಿ ಮಳೆಯ ಹಿನ್ನೆಲೆಯಲ್ಲಿ ಹಗದೂರು ವಾರ್ಡ್‌ನ ರಾಮಗೊಂಡನಹಳ್ಳಿ –  ಆರ್‌. ನಾರಾಯಣಪುರ ಮುಖ್ಯ ರಸ್ತೆ ಕೆಸರು ಗದ್ದೆಯಂತಾಗಿದೆ
ಮಹದೇವಪುರ ಆಸುಪಾಸಿನಲ್ಲಿ ಈಚೆಗೆ ಸುರಿದ ಭಾರಿ ಮಳೆಯ ಹಿನ್ನೆಲೆಯಲ್ಲಿ ಹಗದೂರು ವಾರ್ಡ್‌ನ ರಾಮಗೊಂಡನಹಳ್ಳಿ – ಆರ್‌. ನಾರಾಯಣಪುರ ಮುಖ್ಯ ರಸ್ತೆ ಕೆಸರು ಗದ್ದೆಯಂತಾಗಿದೆ   

ಮಹದೇವಪುರ: ಕ್ಷೇತ್ರದಲ್ಲಿ ಇತ್ತೀಚೆಗೆ ಭಾರಿ ಮಳೆ ಸುರಿದ ಹಿನ್ನೆಲೆಯಲ್ಲಿ ಹಗದೂರು ವಾರ್ಡ್‌ ವ್ಯಾಪ್ತಿಯ ರಾಮಗೊಂಡನಹಳ್ಳಿ – ಆರ್‌. ನಾರಾಯಣಪುರ ಮುಖ್ಯ ರಸ್ತೆಯು ಕೆಸರುಗದ್ದೆಯಾಗಿ ಮಾರ್ಪಟ್ಟಿದೆ. ಇದರಿಂದಾಗಿ ಪಾದಚಾರಿಗಳಿಗೆ ಮತ್ತು ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ.

ಈ ರಸ್ತೆಯು ರಾಮಗೊಂಡನಹಳ್ಳಿಯಿಂದ ಆರ್‌. ನಾರಾಯಣಪುರ ಗ್ರಾಮದ ಮೂಲಕ ವೈಟ್‌ಫೀಲ್ಡ್‌ನ ಬೋರ್‌ವೆಲ್‌ ಮುಖ್ಯರಸ್ತೆಯ ಸಂಪರ್ಕ ರಸ್ತೆಯಾಗಿದೆ. ಅಲ್ಲದೆ ನಲ್ಲೂರುಹಳ್ಳಿ ಗ್ರಾಮಕ್ಕೂ ಸಂಪರ್ಕ ರಸ್ತೆಯಾಗಿರುವ ಈ ರಸ್ತೆ ಪಟ್ಟಂದೂರು ಅಗ್ರಹಾರ ಮತ್ತು ಐಟಿಪಿಎಲ್‌ ತಲುಪಲು ಸಂಪರ್ಕ ಕೊಂಡಿಯಾಗಿದೆ.

ನಾಲ್ಕೈದು ದಿನಗಳಿಂದ ಈ ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಆರ್‌.ನಾರಾಯಣಪುರ ರಸ್ತೆಯಲ್ಲಿನ ಹೊಂಡಗಳು ಮಳೆ ನೀರಿನಿಂದ ತುಂಬಿಕೊಂಡಿವೆ. ರಸ್ತೆಯ ಪಕ್ಕದಲ್ಲಿ ಚರಂಡಿ ವ್ಯವಸ್ಥೆ ಕೂಡ ಇಲ್ಲ.  ಹೀಗಾಗಿ ಮಳೆ ನೀರು ಹರಿದು ಹೋಗದೆ ರಸ್ತೆಯಲ್ಲಿನ ಹೊಂಡಗಳಲ್ಲಿ ಸಂಗ್ರಹಗೊಂಡಿದೆ. ರಸ್ತೆಯ ಎರಡು ಬದಿಗಳಲ್ಲಿ ಪಾದಚಾರಿ ಮಾರ್ಗವೂ ಇಲ್ಲ.

‘ಹತ್ತು ವರ್ಷಗಳಿಂದ ಈ ರಸ್ತೆ ದುರಸ್ತಿ ಆಗಿಲ್ಲ. ಪ್ರತಿನಿತ್ಯ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚಾರ ನಡೆಸುತ್ತಿವೆ. ಸದ್ಯಕ್ಕೆ ಮಳೆಯಿಂದಾಗಿ ಇಡೀ ರಸ್ತೆ ಕೆಸರು ಗದ್ದೆಯಂತಾಗಿದೆ. ರಸ್ತೆಯ ದುರಸ್ತಿ ಬಗ್ಗೆ ಬಿಬಿಎಂಪಿ ಗಮನ ಹರಿಸಿಲ್ಲ’ ಎಂದು ಸ್ಥಳೀಯ ನಿವಾಸಿ ರಾಜಪ್ಪ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.