ADVERTISEMENT

ವಿಜ್ಞಾನ ಮುಂದುವರಿದಿದ್ದರೂ ಮೌಢ್ಯ ಆಳಕ್ಕಿಳಿದಿದೆ

ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ನಾಗೇಶ ಹೆಗಡೆ ವಿಷಾದ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 19:59 IST
Last Updated 23 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ‘ವಿಜ್ಞಾನ ಮತ್ತು ತಂತ್ರ ಜ್ಞಾನ ತೀರಾ ಮುಂದುವರಿದಿದ್ದರೂ ಮೌಢ್ಯವೆಂಬುದು ಆಳಕ್ಕಿಳಿದಿರುವುದ ರಿಂದ ಪ್ರಕೃತಿಯ ವಿಸ್ಮಯಗಳೆಲ್ಲವೂ ಇದರ ನೆಲೆಯಲ್ಲಿಯೇ ವಿಶ್ಲೇಷಣೆಗೆ ಒಳಪಡು ತ್ತಿದೆ’ ಎಂದು ಹಿರಿಯ ಪತ್ರಕರ್ತ ನಾಗೇಶ ಹೆಗಡೆ ವಿಷಾದ ವ್ಯಕ್ತಪಡಿಸಿದರು.

ನವಕರ್ನಾಟಕ ಪ್ರಕಾಶನವು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯ ಕ್ರಮದಲ್ಲಿ ವಿವಿಧ ಪುಸ್ತಕಗಳನ್ನು  ಬಿಡು ಗಡೆ ಮಾಡಿ ಅವರು ಮಾತನಾಡಿದರು.

‘ಕಾಡು, ಧೂಮಕೇತು, ಜ್ವಾಲಾ ಮುಖಿಯ ಬಗ್ಗೆ ಸಾಕಷ್ಟು ಮಾಹಿತಿ ದೊರೆತರೂ ಇವುಗಳನ್ನು ಸೂಕ್ಷ್ಮ ಚಿಂತನೆಗೆ ಹಚ್ಚುವುದಿಲ್ಲ. ಪ್ರಕೃತಿಯ ಪ್ರತಿ ಅಂಶಗಳು ಜಿಡಿಪಿಯ ಭಾಗವಾಗುವುದಿಲ್ಲ. ಬದಲಿಗೆ ಈ ಅಂಶಗಳನ್ನು ಬಳಸಿ ಕೊಂಡು ಉದ್ಯಮ ಮಾಡಿದರೆ ಮಾತ್ರ ದೇಶದ ಅಭಿವೃದ್ಧಿ ಎಂಬ ತಪ್ಪು ಅಭಿಪ್ರಾಯವಿದೆ’ ಎಂದರು.

‘ಪರಿಸರದಲ್ಲಿರುವ ಪ್ರತಿ ಜೀವರಾಶಿ ಗಳು ಒಂದಕ್ಕೊಂದು ಪೂರಕವಾಗಿಯೇ ಬದುಕು ನಡೆಸುತ್ತವೆ. ಸ್ವಾರ್ಥಕ್ಕೆ ಬಿದ್ದ ಮನುಷ್ಯ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಪ್ರಕೃತಿಯನ್ನು ಬಳಸಿ ಕೊಳ್ಳುತ್ತಿದ್ದಾನೆ. ಈ ಎಲ್ಲ ಪುಸ್ತಕಗಳು ಈ ಬಗ್ಗೆ ಚಿಂತನೆಗೆ ಹೆಚ್ಚುತ್ತದೆ’ ಎಂದು ಅವರು ತಿಳಿಸಿದರು.

ವನ್ಯಜೀವಿ ಸಂರಕ್ಷಕ ಕೆ.ಎಂ.ಚಿಣ್ಣಪ್ಪ, ‘ಇಂದಿನ ಪೀಳಿಗೆಯಲ್ಲಿ ಕಾಡು, ವನ್ಯ ಜೀವಿಗಳ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಬೇಕಿದೆ. ತಂತ್ರಜ್ಞಾನದಷ್ಟೆ ಪರಿಸರವೂ ಕೂಡ ಮುಖ್ಯವಾಗಿದೆ’ ಎಂದು ಹೇಳಿದರು.

‘ಪ್ರಪಂಚದ ಆಗುಹೋಗುಗಳನ್ನು ಅರಿಯುವಷ್ಟೇ ಸೂಕ್ಷ್ಮವಾಗಿ ಪ್ರಕೃತಿಯ ಆಗುಹೋಗುಗಳನ್ನು ಕೂಡ ತಿಳಿದು ಕೊಳ್ಳಬೇಕು. ಇದಕ್ಕೆ ಒಂದು ನಿರ್ದಿಷ್ಟ ಶಾಸ್ತ್ರದ ಅಗತ್ಯವಿರುವುದಿಲ್ಲ. ಬದಲಿಗೆ ಆಸಕ್ತಿ ಇರಬೇಕಾಗುತ್ತದೆ. ಈಗ ಬಿಡು ಗಡೆಯಾಗುತ್ತಿರುವ ಎಲ್ಲಾ ಪುಸ್ತಕಗಳು ಒಂದಕ್ಕೊಂದು ಪೂರಕವಾಗಿದೆ’ ಎಂದು ಅಭಿಪ್ರಾಯಪಟ್ಟರು.

ವನ್ಯಜೀವಿ ತಜ್ಞ ಡಾ.ಉಲ್ಲಾಸ ಕಾರಂತ, ‘ವೈಜ್ಞಾನಿಕ ತಳಹದಿ ಯಲ್ಲಿ ಯೇ ನಿಸರ್ಗವನ್ನು ಉಳಿಸುವುದರ  ಜತೆ ಯಲ್ಲಿ ಸಂರಕ್ಷಣೆಯ ವಿಧಾನಗಳುಆದಷ್ಟು ರಾಜ್ಯಭಾಷೆಯಲ್ಲಿರುವಂತೆ ನೋಡಿ ಕೊಳ್ಳುವುದು ಕೂಡ ಮುಖ್ಯ ಎಂದರು.

ಎಸ್.ಶೈಲಜಾ ಅವರ ‘ಬಾಲಂಕೃತ ಚುಕ್ಕಿ–ಧೂಮಕೇತು‘, ಡಾ.ಕೆ.ಎಲ್. ಗೋಪಾಲಕೃಷ್ಣಯ್ಯ ಅನುವಾದಿಸಿರುವ ‘ಭಾರತೀಯ ಇತಿಹಾಸದ ವೈಲಕ್ಷಣ್ಯ ಗಳು‘, ಟಿ.ಎಸ್.ಗೋಪಾಲ್ ಅವರ, ‘ಕಾಡು ಕಲಿಸುವ ಪಾಠ’, ದಯಾ ಪವಾರ್  ಅವರ, ‘ಬಲುತ’, ಟಿ.ಆರ್. ಅನಂತರಾಮು ‘ಭೂಮಿಯ ಟೈಂ ಬಾಂಬ್’, ಟಿ.ಜಿ.ಶ್ರೀನಿಧಿ ಅವರ ‘ಡಿಜಿಟಲ್ ಕ್ಯಾಮೆರಾ ಮೋಡಿ, ಕ್ಲಿಕ್ ಮಾಡಿ ನೋಡಿ’ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.