ಬೆಂಗಳೂರು: ಕರ್ನಾಟಕ ಮಹಿಳಾ ಉದ್ಯಮಿಗಳ ಸಂಘವು (ಅವೇಕ್) ವಿಡಿಯೊ ಸಂವಾದದ ಮೂಲಕ ಮಹಿಳಾ ಉದ್ಯಮಿಗಳಿಗೆ ಮಾರ್ಗದರ್ಶನ ಮತ್ತು ತರಬೇತಿ ನೀಡಲು ಪ್ರಾರಂಭಿಸಿರುವ ‘ವಿಡಿಯೊ ಬ್ಯುಸಿನೆಸ್ ಕೌನ್ಸೆಲಿಂಗ್ ಸೆಂಟರ್’ಗಳಿಗೆ ಮಂಗಳವಾರ ಚಾಲನೆ ನೀಡಲಾಯಿತು.
ತನ್ನ ‘ಅಮಿತ ಸಂಪನ್ಮೂಲ ಸೌಕರ್ಯ’ (ಔರ) ಕಾರ್ಯಕ್ರಮದಡಿಯಲ್ಲಿ ‘ಅವೇಕ್’, ನಗರ ಸೇರಿದಂತೆ ರಾಜ್ಯದ ಎಂಟು ಕಡೆ ಇಂತಹ ಸಲಹಾ ಕೇಂದ್ರಗಳನ್ನು ತೆರೆದಿದೆ.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ರಾಜಾಜಿನಗರ ಕೈಗಾರಿಕಾ ಪ್ರದೇಶ (ಪ್ರಧಾನ ಕಚೇರಿ), ಬೆಂಗಳೂರು ದಕ್ಷಿಣ, ಬೆಳಗಾವಿ, ವಿಜಾಪುರ, ಗುಲ್ಬರ್ಗ, ಕೊಪ್ಪಳ, ಮಳವಳ್ಳಿ (ಮಂಡ್ಯ), ತುಮಕೂರು- ಗಳಲ್ಲಿರುವ ಅವೇಕ್ ಕಚೇರಿಗಳಲ್ಲಿ ಈ ಸಲಹಾ ಕೇಂದ್ರಗಳು ಕಾರ್ಯನಿರ್ವಹಿಸಲಿವೆ.
ಉದ್ಘಾಟನಾ ಸಂದರ್ಭದಲ್ಲಿ ತಾಂತ್ರಿಕ ದೋಷದಿಂದಾಗಿ ಸಲಹಾ ಕೇಂದ್ರಗಳ ನಡುವೆ ವಿಡಿಯೊ ಸಂವಾದ ಸಮರ್ಪಕವಾಗಿ ನಡೆಯಲಿಲ್ಲ.ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ನಿರ್ದೇಶಕ ಡಾ.ರಾಜಕುಮಾರ್ ಖತ್ರಿ ಭಾಗವಹಿಸಿದ್ದರು. ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಸರೋಜಿನಿ ಭಾರದ್ವಾಜ್ ‘ಅವೇಕ್ ಬಜಾರ್’ ಅನ್ನು ಉದ್ಘಾಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.