ನೆಲಮಂಗಲ: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ತಾಲ್ಲೂಕಿನ ಮೆಟ್ರಿಕ್‌ಪೂರ್ವ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
5ರಿಂದ ಎಸ್ಸೆಸ್ಸೆಲ್ಸಿವರೆಗಿನ ಬಾಲಕರು, 4ರಿಂದ ಎಸ್ಸೆಸ್ಸೆಲ್ಸಿವರೆಗಿನ ಬಾಲಕಿಯರು ಪ್ರವೇಶಕ್ಕೆ ಅರ್ಹರು.ಆಸಕ್ತ ವಿದ್ಯಾರ್ಥಿಗಳು ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಕಚೇರಿ ಅಥವಾ ನಿಲಯದ ವಾರ್ಡನ್ ಅವರಿಂದ ಅರ್ಜಿ ಪಡೆದು ಜೂನ್ 10ರೊಳಗೆ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
ನಗರ ಸಾರಿಗೆ ಸಂಚಾರ: ಪಟ್ಟಣದ ಬಸ್ ನಿಲ್ದಾಣದಿಂದ ಬಿಟಿಎಂ ಬಡಾವಣೆಗೆ 258 ಬಿಎನ್ ಸಂಖ್ಯೆಯ ನಗರ ಸಾರಿಗೆ ಬಸ್ ಶನಿವಾರ ಸಂಚಾರ ಆರಂಭಿಸಿದೆ.
ಸಾರ್ವಜನಿಕರ ಕೋರಿಕೆಯ ಮೇರೆಗೆ ಬೆಳಿಗ್ಗೆ 6ರಿಂದ ರಾತ್ರಿ 10ರ ವರೆಗೆ ಎರಡು ಬಸ್‌ಗಳು ನೆಲಮಂಗಲ, ಪೀಣ್ಯ, ಯಶವಂತಪುರ, ಕೆ.ಆರ್.ಸರ್ಕಲ್, ಲಾಲ್‌ಬಾಗ್, ಜಯನಗರ ಮಾರ್ಗವಾಗಿ ಸಂಚರಿಸಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.