ಮಹದೇವಪುರ: ಕವಿತೆಗಳನ್ನು ಪ್ರೀತಿಸುವ ಮತ್ತು ಆಸ್ವಾದಿಸುವ ಜನರು ಕಡಿಮೆಯಾದಂತೆ ಕವನ ಬರೆಯುವ ಕವಿಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪುಂಡಲೀಕ ಹಾಲಂಬಿ ವಿಷಾದಿಸಿದರು.
ವಿಶ್ವ ಕಾರ್ಮಿಕರ ದಿನಾಚರಣೆಯ ನಿಮಿತ್ತ ವಿಮಾನಪುರದಲ್ಲಿ ಏರ್ಪಡಿಸಿದ್ದ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಮಾನಪುರದಲ್ಲಿನ ಕಾರ್ಖಾನೆಯಲ್ಲಿ ಸಾವಿರಾರು ಮಂದಿ ಕೆಲಸಗಾರರಿದ್ದಾರೆ. ಆದರೆ ಕವಿಗೋಷ್ಠಿಯಲ್ಲಿ ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಪಾಲ್ಗೊಂಡಿರುವುದು ಬೇಸರದ ಸಂಗತಿ. ಕನ್ನಡದ ಕಾರ್ಯಕ್ರಮಗಳನ್ನು ಒಗ್ಗಟ್ಟಿನಿಂದ ಹಾಗೂ ಆಸಕ್ತಿಯಿಂದ ಸಂಘಟಿಸಬೇಕು. ಕಾಟಾಚಾರಕ್ಕೆ ಕಾರ್ಯಕ್ರಮವಾಗಬಾರದು ಎಂದರು.
ಸಾಹಿತಿ ಡಾ. ಎಲ್.ಹನುಮಂತಯ್ಯ, ಕವಿ ಸವಿರಾಜು, ಡಾ. ಕೋ.ವೆಂ.ರಾಮಕೃಷ್ಣ ಗೌಡ ಹಾಗೂ ತಾ.ಸಿ.ತಿಮ್ಮಯ್ಯ ಕ್ರಾಂತಿಗೀತೆಗಳನ್ನು ಹಾಡಿದರು. ಎ.ಶ್ರೀಲತಾ, ವಿಶಾಲ ಆರಾಧ್ಯ, ಬನ್ನಪ್ಪ, ಮಹೇಶ ಊಗಿನಹಳ್ಳಿ ಹಾಗೂ ಬಿ.ಎಸ್.ಶ್ರೀನಿವಾಸ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.