ADVERTISEMENT

ಶನೀಶ್ವರ ಸ್ವಾಮಿ ದೇಗುಲ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2019, 19:26 IST
Last Updated 3 ಆಗಸ್ಟ್ 2019, 19:26 IST
ಹೂಗಳಿಂದ ಅಲಂಕೃತಗೊಂಡಿರುವ ಶನೀಶ್ವರ ಸ್ವಾಮಿ ಮೂರ್ತಿ
ಹೂಗಳಿಂದ ಅಲಂಕೃತಗೊಂಡಿರುವ ಶನೀಶ್ವರ ಸ್ವಾಮಿ ಮೂರ್ತಿ   

ದಾಬಸ್ ಪೇಟೆ: ಹೊಸಪಾಳ್ಯದ ಶನೀಶ್ವರ ಸ್ವಾಮಿ ದೇಗುಲದ 77ನೇ ವಾರ್ಷಿಕೋತ್ಸವವು ಶ್ರಾವಣ ಮಾಸದ ಮೊದಲ ಶನಿವಾರ ವೈಭವದಿಂದ ನೆರವೇರಿತು.

ದೇವಾಲಯವನ್ನು ಹೂ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಶುಕ್ರವಾರ ಸಂಜೆಯಿಂದ ಹೋಮ–ಹವನ ನಡೆದವು.ಸುತ್ತ–ಮುತ್ತಲಿನ ಗ್ರಾಮಗಳ ಸಾವಿರಾರು ಜನ ಭೇಟಿ ನೀಡಿ, ಶನೀಶ್ವರಗೆ ಪೂಜೆ ಸಲ್ಲಿಸಿದರು.

’ದ್ವೇಷ, ಅಸೂಯೆ, ಮನಸ್ತಾಪ ಗಳನ್ನು ಮರೆತು ಪ್ರೀತಿ ಹಾಗೂ ಭ್ರಾತೃತ್ವದಿಂದ ಬದುಕುವುದನ್ನು ಕಲಿಯಬೇಕು. ದೇವರನ್ನು ಯಾರು ನೋಡಲಾಗದು. ಆದರೆ ನಮ್ಮ ಸಜ್ಜನಿಕೆ, ಸ್ನೇಹದ ವ್ಯಕ್ತಿತ್ವದಿಂದ ಎಲ್ಲೆಡೆಯೂ ದೇವರನ್ನು ಕಾಣಬಹುದು’ ಎಂದರು ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ. ಅರ್ಚಕ ಗವೀರಂಗಪ್ಪ ಮಾತನಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.