ADVERTISEMENT

‘ಶರೀರವ್ಯಾಧಿಗಿಂತ ಮನೋವ್ಯಾಧಿ ಭಯಾನಕ’

​ಪ್ರಜಾವಾಣಿ ವಾರ್ತೆ
Published 31 ಮೇ 2019, 20:07 IST
Last Updated 31 ಮೇ 2019, 20:07 IST
ಸಿದ್ಧಾರೂಢ ಆಶ್ರಮದ ಅಧ್ಯಕ್ಷ ಆರೂಢ ಭಾರತಿ ಸ್ವಾಮೀಜಿ ಮಾತನಾಡಿದರು. ಆಯುರ್ವೇದವೈದ್ಯ ಮೂರ್ತಿ ಆನಂದ ಸ್ವಾಮೀಜಿ ಇದ್ದರು.
ಸಿದ್ಧಾರೂಢ ಆಶ್ರಮದ ಅಧ್ಯಕ್ಷ ಆರೂಢ ಭಾರತಿ ಸ್ವಾಮೀಜಿ ಮಾತನಾಡಿದರು. ಆಯುರ್ವೇದವೈದ್ಯ ಮೂರ್ತಿ ಆನಂದ ಸ್ವಾಮೀಜಿ ಇದ್ದರು.   

ಬೆಂಗಳೂರು: ‘ಆಧುನಿಕ ಶಸ್ತ್ರಚಿಕಿತ್ಸೆ ಹಾಗೂ ಔಷಧಗಳ ಮೂಲಕ ಶರೀರದ ಕಾಯಿಲೆಗಳನ್ನು ನಿವಾರಿಸಿಕೊಳ್ಳಬಹುದು. ಆದರೆ, ಮನೋವ್ಯಾಧಿಯನ್ನು ಗುಣಪಡಿಸಲು ವೇದಾಂತವೇ ದಿವ್ಯೌಷಧ. ಹೀಗಾಗಿಶರೀರ ವ್ಯಾಧಿಗಿಂತ ಮನೋವ್ಯಾಧಿ ಭಯಾನಕ’ ಎಂದು ಸಿದ್ಧಾರೂಢ ಮಿಷನ್ ಆಶ್ರಮದ ಆರೂಢ ಭಾರತೀ ಸ್ವಾಮೀಜಿ ಅಭಿಪ್ರಾಯಪಟ್ಟರು.

ರಾಮೋಹಳ್ಳಿಯ ಸಿದ್ಧಾರೂಢ ಅಂತರರಾಷ್ಟ್ರಿಯ ಸಂಶೋಧನಾ ಕೇಂದ್ರ ಹಾಗೂ ಪಾಲಿಕೆಯ ಸಹಯೋಗದಲ್ಲಿ ನಡೆದ ಶಾಸ್ತ್ರಮಂಟಪ ವೇದಾಂತ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

‘ಜೀವನದಲ್ಲಿ ಸುಖದುಃಖಗಳು ಇದ್ದಿದ್ದೇ. ಅದನ್ನು ಸಹಿಸಿಕೊಳ್ಳಬೇಕು ಎಂಬ ಮಾತುಗಳು ಮನುಷ್ಯನನ್ನು ಗಟ್ಟಿಗೊಳಿಸುತ್ತವೆ’ ಎಂದರು.ಕನಕಪುರದ ಮೂರ್ತಿ ಆನಂದ ಸ್ವಾಮೀಜಿ, ದೇನಾ ಭಗತ್ ಸ್ವಾಮೀಜಿ, ನೆ.ಲ.ನರೇಂದ್ರಬಾಬು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.