ADVERTISEMENT

ಶೇ 51ರಷ್ಟು ಪರಿಸರ ಸ್ನೇಹಿ ಗಣಪ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2011, 20:05 IST
Last Updated 4 ಸೆಪ್ಟೆಂಬರ್ 2011, 20:05 IST

ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಗರದ ಸುತ್ತಮುತ್ತ ಇದೇ 1ರಂದು ವ್ಯವಸ್ಥೆ ಮಾಡಿದ್ದ 11 ಸಂಚಾರಿ ಮೂರ್ತಿ ವಿಸರ್ಜನಾ ವಾಹನಗಳಲ್ಲಿ ಒಟ್ಟು 3205 ಗಣೇಶನ ವಿಗ್ರಹಗಳು ವಿಸರ್ಜನೆಯಾಗಿದ್ದು ಇವುಗಳಲ್ಲಿ 1630 ಬಣ್ಣ ರಹಿತ ಗಣಪತಿ ಮೂರ್ತಿಗಳು ಸೇರಿವೆ ಎಂದು ಮಂಡಳಿಯ ಪ್ರಕಟಣೆ ತಿಳಿಸಿದೆ.

ಶೇಕಡಾ 51ರಷ್ಟು ಪ್ರಮಾಣದಲ್ಲಿ ಪರಿಸರ ಸ್ನೇಹಿ ಗಣಪತಿ ವಿಗ್ರಹಗಳನ್ನು ವಿಸರ್ಜಿಸಲಾಗಿದ್ದು ಜೀವನ್‌ಭೀಮಾ ನಗರ- ಹಲಸೂರು ಮಾರ್ಗದಲ್ಲಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ.  ಈ ಮಾರ್ಗದಲ್ಲಿ ತೆರಳಿದ ವಾಹನದಲ್ಲಿ 820 ಮೂರ್ತಿಗಳನ್ನು ವಿಸರ್ಜಿಸಲಾಗಿದ್ದು ಇವುಗಳಲ್ಲಿ 756 ಬಣ್ಣ ರಹಿತ ಮೂರ್ತಿಗಳಾಗಿದ್ದವು.

2 ಅಡಿಗಿಂತ ಚಿಕ್ಕದಾದ 720 ಮೂರ್ತಿಗಳು, 2 ಅಡಿಗಿಂತ ದೊಡ್ಡದಾದ 55 ವಿಗ್ರಹಗಳು, ಪ್ಲಾಸ್ಟರ್ ಆಫ್ ಪ್ಯಾರಿಸ್‌ನ 8 ಮೂರ್ತಿಗಳು ವಿಸರ್ಜನೆಯಾಗಿವೆ.

ಮಲ್ಲೇಶ್ವರ- ಯಶವಂತಪುರ ಮಾರ್ಗದಲ್ಲಿ 644 ಮೂರ್ತಿಗಳನ್ನು ವಿಸರ್ಜಿಸಲಾಗಿದ್ದು ಅವುಗಳಲ್ಲಿ 308 ಬಣ್ಣ ರಹಿತ ಮೂರ್ತಿಗಳು ಸೇರಿವೆ. ಜಯನಗರ- ಹನುಮಂತನಗರ ಮಾರ್ಗ ಮೂರನೇ ಸ್ಥಾನದಲ್ಲಿದ್ದು ವಿಸರ್ಜನೆಯಾದ 382 ಮೂರ್ತಿಗಳಲ್ಲಿ 138 ಪರಿಸರ ಸ್ನೇಹಿಯಾಗಿದ್ದವು.

2010ರಲ್ಲಿ ಮಂಡಳಿಯ ವಾಹನಗಳಲ್ಲಿ ಒಟ್ಟು 3700 ಮೂರ್ತಿಗಳು ವಿಸರ್ಜನೆಯಾಗಿದ್ದು ಅದರಲ್ಲಿ 2158 ಪರಿಸರ ಸ್ನೇಹಿ ಮೂರ್ತಿಗಳಾಗಿದ್ದವು ಎಂದು ಪ್ರಕಟಣೆ ಮಾಹಿತಿ ನೀಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.