ADVERTISEMENT

ಸಂಕ್ಷಿಪ್ತ ಸುದ್ದಿ ಬೆಂಗಳೂರು

​ಪ್ರಜಾವಾಣಿ ವಾರ್ತೆ
Published 19 ಜೂನ್ 2013, 19:59 IST
Last Updated 19 ಜೂನ್ 2013, 19:59 IST

ಅರ್ಜಿ ಆಹ್ವಾನ
ಸತ್ಯ ಸಾಯಿ ಮಹಿಳಾ ಚಾರಿಟಬಲ್ ಟ್ರಸ್ಟ್ ನಡೆಸುತ್ತಿರುವ ಸತ್ಯ ಭಾರತಿ ಆಶ್ರಮದ ಶಾಲೆಗೆ 6 ವರ್ಷ ದಾಟಿದ ಮಕ್ಕಳ ಪ್ರವೇಶಕ್ಕಾಗಿ ಪೋಷಕರಿಂದ ಅರ್ಜಿ ಆಹ್ವಾನಿಸಿದೆ.
ಶಾಲೆಗೆ ಆಯ್ಕೆಯಾದ ಮಕ್ಕಳಿಗೆ ಉಚಿತ ವಸತಿ ಮತ್ತು ವಿದ್ಯಾಭ್ಯಾಸದ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ತಿಳಿಸಿದೆ. ವಿಳಾಸ: ಸತ್ಯ ಸಾಯಿ ಮಹಿಳಾ ಚಾರಿಟಬಲ್ ಟ್ರಸ್ಟ್, ನಂ.40/1, ನಾಗದೇವನಹಳ್ಳಿ, ಜ್ಞಾನಭಾರತಿ ಅಂಚೆ. ವಿವರಗಳಿಗೆ: 90606 70793.

ಅಧಿಕಾರ ಸ್ವೀಕಾರ
ಬೆಂಗಳೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಹಿರಿಯ ಕವಿ ಡಾ.ಸಿದ್ದಲಿಂಗಯ್ಯ ನೇಮಕಗೊಂಡಿದ್ದು, ಬುಧವಾರ ಅಧಿಕಾರ ಸ್ವೀಕರಿಸಿದರು.

ಉಚಿತ ಧ್ಯಾನ ಶಿಬಿರ
ಇಂಪೀರಿಯನ್ಸ್ ಸಂಸ್ಥೆಯು ಜೂನ್ 22 ಮತ್ತು 23 ರಂದು ಉಚಿತ ಧ್ಯಾನ ತರಬೇತಿ ಶಿಬಿರವನ್ನು ಏರ್ಪಡಿಸಿದೆ. ಶಿಬಿರದಲ್ಲಿ `ಪ್ರಾಣಾಹುತಿ ಸಹಿತ ಧ್ಯಾನ'ದ ಪರಿಚಯ ಮಾಡಿಕೊಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಆಸಕ್ತರು ಹೆಸರು ನೊಂದಣಿಗಾಗಿ ವೆಬ್‌ಸೈಟ್ ಡಿಡಿಡಿ.ಠ್ಟಜ್ಟಿಞಚ್ಚಛ್ಟ.ಟ್ಟಜ ಗೆ ಸಂಪರ್ಕಿಸಬಹುದು.
ಮಾಹಿತಿಗಾಗಿ: 99865 00044.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.