ADVERTISEMENT

ಸಮಕಾಲೀನ ಸಮಸ್ಯೆ ಅರಿತು ಕವಿತೆ ರಚಿಸಿ: ಸಾಹಿತಿ ಎಚ್.ದಂಡಪ್ಪ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2018, 19:29 IST
Last Updated 26 ಅಕ್ಟೋಬರ್ 2018, 19:29 IST
ಕವಿಗೋಷ್ಠಿಯನ್ನು ಪಾಲಿಕೆ ಸದಸ್ಯ ಜಿ.ಮೋಹನ್‍ಕುಮಾರ್ ಉದ್ಘಾಟಿಸಿದರು
ಕವಿಗೋಷ್ಠಿಯನ್ನು ಪಾಲಿಕೆ ಸದಸ್ಯ ಜಿ.ಮೋಹನ್‍ಕುಮಾರ್ ಉದ್ಘಾಟಿಸಿದರು   

ಬೆಂಗಳೂರು: ಸಮಕಾಲೀನ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಿಕೊಂಡು ಪರಿಣಾಮಕಾರಿಯಾಗಿ ಕವಿತೆಗಳನ್ನು ರಚಿಸಬೇಕು ಎಂದುವಿಮರ್ಶಕ ಹಾಗೂ ಸಾಹಿತಿ ಎಚ್.ದಂಡಪ್ಪ ಹೇಳಿದರು.

ಬೆಂಗಳೂರು ನಗರ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಾಕ್ಷಾತ್ಕಾರ ಚಾರಿಟಬಲ್ ಸೊಸೈಟಿ ಆಶ್ರಯದಲ್ಲಿ ಪಾಪರೆಡ್ಡಿಪಾಳ್ಯದ ಕಿತ್ತೂರು ರಾಣಿ ಚನ್ನಮ್ಮ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ಜಿಲ್ಲಾ ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಚುಟುಕು ಕವಿತೆ ರಚಿಸುವ ಜತೆಗೆ ದೀರ್ಘ ಕವಿತೆಗಳನ್ನು ರಚಿಸುವ ಬಗ್ಗೆ ಆಸಕ್ತಿ ಮೂಡಿಸಿಕೊಳ್ಳಬೇಕು. ಕವಿತೆ ಬರೆಯುವುದು ತಮಾಷೆಗಲ್ಲ. ಜ್ಞಾನದ ವಿಸ್ತಾರಕ್ಕಾಗಿ ಎಂಬುದನ್ನು ಅರಿತುಕೊಳ್ಳಬೇಕು ಎಂದರು.

ADVERTISEMENT

ಪಾಲಿಕೆ ಸದಸ್ಯ ಜಿ.ಮೋಹನ್‍ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.