ADVERTISEMENT

ಸಮಾಜದಲ್ಲಿ ಶಾಂತಿ ನೆಲಸಲಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2012, 19:30 IST
Last Updated 10 ಮಾರ್ಚ್ 2012, 19:30 IST

ನೆಲಮಂಗಲ: ಸಮಾಜದಲ್ಲಿ ಧರ್ಮ ಕಾರ್ಯಗಳು ಮೇಲಿಂದ ಮೇಲೆ ನಡೆದು ವಿಶ್ವದಲ್ಲಿ ಸುಖ ಶಾಂತಿಗಳು ಲಭಿಸಲಿ ಎಂದು ವಿಶ್ವ ಒಕ್ಕಲಿಗರ ಪೀಠದ ಕುಮಾರ ಚಂದ್ರಶೇಖರ ಸ್ವಾಮೀಜಿ ಹಾರೈಸಿದರು.

ತಾಲ್ಲೂಕಿನ ತಡಶೀಘಟ್ಟದ ಲಕ್ಷ್ಮೀನರಸಿಂಹ ಸ್ವಾಮಿ ಬ್ರಹ್ಮರಥೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ಧರ್ಮಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಗ್ರಾಮದ ಪಟೇಲರಾದ ಟಿ.ಎನ್.ಕೃಷ್ಣೇಗೌಡ ರಥೋತ್ಸವಕ್ಕೆ ಚಾಲನೆ ನೀಡಿದರು. ಅನುದಾನ ರಹಿತ ಶಾಲಾ ಒಕ್ಕೂಟದ ಅಧ್ಯಕ್ಷ ಟಿ.ಕೆ.ನರಸೇಗೌಡ, ಗ್ರಾ.ಪಂ. ಅಧ್ಯಕ್ಷೆ ಶಾರದಮ್ಮ ಬಾಬು, ಸದಸ್ಯರಾದ ಪುರುಷೋತ್ತಮ್, ರಾಧಾಕೃಷ್ಣ, ಮಂಗಳಾಂಬಾ, ಕೃಷ್ಣಪ್ಪ, ಲೋಕೇಶ್ ಧರ್ಮಸಭೆಯ ವೇದಿಕೆಯಲ್ಲಿದ್ದರು.

ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಭಾಗವಹಿಸಿದ್ದರು. ಪ್ರಸಾದ ವ್ಯವಸ್ಥೆ, ಅರವಟಿಗೆ, ಅನ್ನಸಂತರ್ಪಣೆ ಮಾಡಲಾಗಿತ್ತು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.