ADVERTISEMENT

ಸರ್ಕಾರಿ ಸವಲತ್ತುಗಳ ಸದುಪಯೋಗಕ್ಕೆ ಸಲಹೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2012, 19:30 IST
Last Updated 11 ಮಾರ್ಚ್ 2012, 19:30 IST

ರಾಜರಾಜೇಶ್ವರಿ ನಗರ: ನಿರುದ್ಯೋಗಿಗಳು ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳುವುದರ ಜತೆಗೆ ವಿವಿಧ ತರಬೇತಿ ಪಡೆದು ನೆಮ್ಮದಿಯ ಜೀವನ ಸಾಗಿಸಲು ಮುಂದಾಗುವಂತೆ ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಅವರು ಸಲಹೆ ನೀಡಿದರು.

ಉತ್ತರಹಳ್ಳಿಯಲ್ಲಿ ಬಿಬಿಎಂಪಿ ವತಿಯಿಂದ ಸ್ವಯಂ ಉದ್ಯೋಗ ಯೋಜನೆಯಡಿ ಕಾರು, ಆಟೊರಿಕ್ಷ, ಲಘು ವಾಹನ, ವಿದ್ಯಾರ್ಥಿ ವೇತನ, ಪೌರ ಕಾರ್ಮಿಕರಿಗೆ ಹೆಲ್ತ್ ಕಿಟ್, ಭಾಗ್ಯಲಕ್ಷ್ಮಿ ಯೋಜನೆಯ ಫಲಾನುಭವಿ ತಾಯಂದಿರಿಗೆ ಬಾಂಡ್‌ಗಳನ್ನು ವಿತರಿಸಿ ಅವರು ಮಾತನಾಡಿದರು.

ಹಿರಿಯ ನಾಗರಿಕರು ಗುಂಡು ತೋಪುಗಳಲ್ಲಿ ಮರಗಳನ್ನು ಬೆಳೆಸಿ ಕುಂಟೆಗಳನ್ನು ನಿರ್ಮಿಸುವ ಮೂಲಕ ಅಂತರ್ಜಲ ವೃದ್ಧಿಗೆ ಮುಂದಾಗಬೇಕು~ ಎಂದು ಹೇಳಿದರು.

`ಚರಂಡಿ ನೀರನ್ನು ಶುದ್ಧೀಕರಿಸಿ ಕೆರೆಗಳಿಗೆ ಹರಿಸಲು ಯೋಜನೆ ರೂಪಿಸಲಾಗಿದೆ~ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಪಾಲಿಕೆ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ ರಾಜು, ಜಂಟಿ ಆಯುಕ್ತ ಶಿವಬಸವಯ್ಯ, ಉಪ ಆಯುಕ್ತ ರಾಮಶೆಟ್ಟಿಗಾರ್, ಕಲ್ಯಾಣಾಧಿಕಾರಿ ಎಂ.ಚಂದ್ರ ರಾವ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ವೆಂಕಟೇಶ್, ಸಹಾಯಕ  ಎಂಜಿನಿಯರ್ ಕದರೀಪತಿ, ಕ್ಷೇತ್ರದ ಬಿಜೆಪಿ    ಪ್ರಧಾನ ಕಾರ್ಯದರ್ಶಿ ಹನುಮಂತು, ಯುವ ಮೋರ್ಚಾ ಅಧ್ಯಕ್ಷ ಅಯ್ಯಪ್ಪ ಮತ್ತಿತರರು      ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.